ಹಾಕತ್ತೂರಿನಲ್ಲಿ ₹50 ಲಕ್ಷ ವೆಚ್ಚದಲ್ಲಿ ತಡೆಗೋಡೆ ಕಾಮಗಾರಿಗೆ ಶಾಸಕ ಎಎಸ್ ಪೊನ್ನಣ್ಣ ಚಾಲನೆ
admincoorgdaily

ಮಡಿಕೇರಿ;ತಾಲೂಕಿನ ಹಾಕತ್ತೂರು ಗ್ರಾಮಕ್ಕೆ, ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭೇಟಿ ನೀಡಿದರು. ಈ ಭಾಗದಲ್ಲಿ ಶಾಸಕರ ವಿಶೇಷ ಪ್ರಯತ್ನವಾಗಿ, ಸಣ್ಣ ನೀರಾವರಿ ಇಲಾಖೆಯ ಅನುದಾನದ ₹50 ಲಕ್ಷದಲ್ಲಿ ನಿರ್ಮಿಸಲು ಉದ್ದೇಶಿಸಿರುವ ತಡೆಗೋಡೆ ಕಾಮಗಾರಿ ಆರಂಭಿಸಲು ಭೂಮಿ ಪೂಜೆಯನ್ನು ಮೊದಲಿಗೆ ಶಾಸಕರು ನೆರವೇರಿಸಿ ಶುಭ ಕೋರಿದರು.
ಆ ಬಳಿಕ ಇತ್ತೀಚೆಗೆ ಮಾನ್ಯ ಶಾಸಕರ ನೀಡಿದ ಅನುದಾನ ₹25 ಲಕ್ಷಗಳಲ್ಲಿ ನಿರ್ಮಾಣವಾಗಿರುವ ಹೂಕಾಡು ಪೈಸರಿಯ 1.1 ಕಿಲೋಮೀಟರ್ ಉದ್ದದ ಆಸ್ಪಾಲ್ಟ್ ರಸ್ತೆಯನ್ನು ಉದ್ಘಾಟಿಸಿ, ಶಾಸಕರು ಶುಭ ಕೋರಿದರು. ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷರು ಇಸ್ಮಾಯಿಲ್, ಪಕ್ಷದ ಪ್ರಮುಖರು ಸೂರಜ್ ಹೊಸೂರು, ಜಿಲ್ಲಾ ವಕ್ತರರು ತೆನ್ನಿರ ಮೈನಾ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರು ಯತೀಶ್, ಮಾಜಿ ಸದಸ್ಯೆ ಶೈನಿ, ವಲಯ ಅಧ್ಯಕ್ಷ ನಾರಾಯಣ, ಪಿಯೂಷ್ ಪೆರೇರಾ, ಆಪ್ರು ರವೀಂದ್ರ, ಸಾಕಿಬ್, ಹಾಗೂ ಪ್ರಮುಖರು ಉಪಸ್ಥಿತರಿದ್ದರು.