ಭಾಗಮಂಡಲದಲ್ಲಿ 3ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಶಾಸಕ ಎಎಸ್ ಪೊನ್ನಣ್ಣ ಚಾಲನೆ
admincoorgdaily

ಭಾಗಮಂಡಲ:ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಡಿಕೇರಿ ತಾಲೂಕಿನ ಭಾಗಮಂಡಲಕ್ಕೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯವರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ₹ 3 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ನಿಮಿತ್ತ ಭೇಟಿ ನೀಡಿದರು.
ಭಾಗಮಂಡಲ ಮೇಲ್ಸೇತುವೆ ಅಭಿವೃದ್ಧಿ ಹಾಗೂ ಕಾವೇರಿ ಮತ್ತು ಕನ್ನಿಕಾ ನದಿಗಳಿಗೆ ಅಡ್ಡಲಾಗಿ ಕಾಲು ಸೇತುವೆ ನಿರ್ಮಾಣ ಕಾಮಗಾರಿಗಳಿಗೆ ಭೂಮಿ ಪೂಜೆಯನ್ನು ನೆರವೇರಿಸಿದ ಮಾನ್ಯ ಶಾಸಕರು, ನೀರಾವರಿ ನಿಗಮದ ವತಿಯಿಂದ ವಿಶೇಷ ಪ್ರಯತ್ನವಾಗಿ ಈ ಅನುದಾನವನ್ನು ತರಲಾಗಿದ್ದು ಶೀಘ್ರದಲ್ಲೇ ಈ ಕಾಮಗಾರಿ ಪ್ರಾರಂಭಗೊಳ್ಳಲಿದ್ದು ಉತ್ತಮ ಗುಣಮಟ್ಟ ಕಾಯ್ದುಕೊಳ್ಳುವುದರೊಂದಿಗೆ ಇಲ್ಲಿಯ ಜನತೆಯ ಸಮಸ್ಯೆಯನ್ನು ಬಗೆಹರಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸಲಿದೆ ಎಂದು ಬಣ್ಣಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರು ಚೆಪ್ಪುಡೀರ ಅರುಣ್ ಮಾಚಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶೌಕತ್ ಅಲಿ, ತಾಲೂಕು ಬಗರ್ ಹುಕುಂ ಅಧ್ಯಕ್ಷರು ನೇರವಂಡ ಉಮೇಶ್, ಸಾಮಾಜಿಕ ಜಾಲತಾಣ ಜಿಲ್ಲಾಧ್ಯಕ್ಷರು ಸೂರಜ್ ಹೊಸೂರು, ಯುವ ಕಾಂಗ್ರೆಸ್ಸಿನ ಗೌರೀಶ್ ರೈ, ಡಿ.ಎನ್ ಹರ್ಷ, ಸುನಿಲ್ ಪತ್ ರಾವ್, ಕೆ ಜಿ ರಘುನ್ನಾಥ್, ಕೆ ಎ ಹ್ಯಾರೀಶ್, ಚೆಟ್ಟಿಮನಿ ವಲಯ ಅಧ್ಯಕ್ಷರು ಕೀರ್ತಿ ಉತ್ತಪ್ಪ, ಕಕ್ಕಬೆ ಪಂಚಾಯತ್ ಮಾಜಿ ಅಧ್ಯಕ್ಷರು ಸಂಪನ್ ಅಯ್ಯಪ್ಪ, ಜಗಧೀಶ್, ಮಹಿಳಾ ಅಧ್ಯಕ್ಷರು ಇಂದುಮತಿ ರವೀಂದ್ರ, ಕೆ ಟಿ ರಮೇಶ್, ಕೆ ಬಿ ಸುರೇಂದ್ರ, ಕೆ ಎಂ ಹರೀಶ್, ಯುವ ಕಾಂಗ್ರೆಸ್ ಗೌರೀಶ್, ಕೆ ಯು ಕುಮಾರ್, ರಜಾಕ್, ದಯಾ ಚಿಣ್ಣಪ್ಪ, ಮಿಥುನ್ ಮಾಚಯ್ಯ, ಆಪ್ರು ರವೀಂದ್ರ, ನಂದ, ದೇವಯ್ಯ, ಪಟ್ಟಮಾಡ ಸಂಜು, ಹಾಗೂ ಪ್ರಮುಖರು ಉಪಸ್ಥಿತರಿದ್ದರು.