ಕಿಡ್ನಿ ರೋಗಿಗಳ ಡಯಾಲಿಸಿಸ್ ಗೆ ನೆರವಾಗಲು ಬಿರಿಯಾನಿ ಚಾಲೆಂಜ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕ ಎಎಸ್ ಪೊನ್ನಣ್ಣ

ಕಿಡ್ನಿ ರೋಗಿಗಳ ಡಯಾಲಿಸಿಸ್ ಗೆ ನೆರವಾಗಲು ಬಿರಿಯಾನಿ ಚಾಲೆಂಜ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕ ಎಎಸ್ ಪೊನ್ನಣ್ಣ

ಸಿದ್ದಾಪುರ:ನೆಲ್ಲಿಹುದಿಕೇರಿಯ ಶಾದಿ ಮಹಲ್ ಸಭಾಂಗಣದಲ್ಲಿ, ತನಲ್ ಸಂಸ್ಥೆಯವರು ಆಯೋಜಿಸಿರುವ ಬಡ ಕಿಡ್ನಿ ರೋಗಿಗಳ ಡಯಾಲಿಸಿಸ್ ಗೆ ನೆರವಾಗಲು ಬಿರಿಯಾನಿ‌ ಚಾಲೆಂಜ್ ಕಾರ್ಯಕ್ರಮದಲ್ಲಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಉದ್ಘಾಟನೆ ನೆರೆವೇರಿಸಿದರು.

ಹಲವಾರು ಸಾಮಾಜಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿರುವ ತನಲ್ ಸಂಸ್ಥೆಯ ಕಾರ್ಯವೈಖರಿ ಎಲ್ಲರಿಗೂ ಮಾದರಿ ಹಾಗೂ ಶ್ಲಾಘನೀಯ ಎಂದು ಬಣ್ಣಿಸಿದರು. ಸಂಸ್ಥೆಯು ಕೈಗೊಳ್ಳುತ್ತಿರುವ ಹಲವಾರು ಕಾರ್ಯಕ್ರಮಗಳು ಇಂದು ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುತ್ತಿದ್ದು ಇದರಿಂದ ಎಲ್ಲರೂ ಇಂತಹ ಕಾರ್ಯಕ್ರಮಗಳನ್ನು ಮಾಡಲು ಪ್ರೇರೇಪಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು

.ಈ ಸಂದರ್ಭದಲ್ಲಿ,ಕೊಡಗು ಜಿಲ್ಲಾ ಬಿಜೆಪಿ‌ ಪ್ರಧಾನ ಕಾರ್ಯದರ್ಶಿ ವಿಕೆ ಲೋಕೇಶ್,ಮಾಜಿ ಜಿ.ಪಂ ಸದಸ್ಯ ವೆಂಕಟೇಶ್,ಸಿದ್ದಾಪುರ ವಲಯ ಅಧ್ಯಕ್ಷರು ಪ್ರತೀಶ್, ಪಕ್ಷದ ಹಿರಿಯರು ಚೆಕು, ಸಿದ್ದಾಪುರ ಧರ್ಮ ಗುರುಗಳು, ಪಂಚಾಯಿತಿ ಉಪಾಧ್ಯಕ್ಷರು ಪಳನಿ ಸ್ವಾಮಿ, ಸದಸ್ಯರು ದೇವಿಯನಿ, ಅಬ್ದುಲ್ ಸುಕೂರ್, ಜಾಫರ್, ರವಿ, ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.