ಮೊಗೇರ ಸಮಾಜದ ಕ್ರೀಡಾಕೂಟದಲ್ಲಿ ಭಾಗವಹಿಸಿದ ಶಾಸಕ ಎಎಸ್ ಪೊನ್ನಣ್ಣ
admincoorgdaily

ಮಡಿಕೇರಿ;ಕೊಡಗು ಜಿಲ್ಲಾ ಮೊಗೇರಾ ಸೇವಾ ಸಮಾಜದವರು ಆಯೋಜಿಸಿದ ಕ್ರೀಡಾಕೂಟದ ಮುಖ್ಯ ಅತಿಥಿಯಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿದರು. ಜನರಲ್ ತಿಮ್ಮಯ್ಯ ಕ್ರೀಡಾಂಗಣ, ಮಡಿಕೇರಿಯಲ್ಲಿ ಈ ಕ್ರೀಡಾಕೂಟವು ಆಯೋಜನೆಗೊಂಡಿದ್ದು, ಪಂದ್ಯಾಟದಲ್ಲಿ ಭಾಗವಹಿಸಿದ ಮೊಗೆರ ಸಮಾಜದ ಎಲ್ಲಾ ಬಾಂಧವರಿಗೆ ಶಾಸಕರು ಶುಭ ಕೋರಿದರು.
ಜಿಲ್ಲೆಯ ಮೂಲೆ ಮೂಲೆಯಿಂದ ಆಗಮಿಸಿದ ಮೊಗೇರ ಸಮುದಾಯದ ಬಾಂಧವರು ಈ ಕ್ರೀಡೆಯನ್ನು ಅತ್ಯಂತ ವಿಜೃಂಭಣೆಯಿಂದ ಆಯೋಜಿಸಿರುವುದು ಸಂತೋಷ ತಂದಿದೆ. ಕ್ರೀಡೆಯಂತೆ ಎಲ್ಲಾ ಕ್ಷೇತ್ರದಲ್ಲೂ ಸಮಾಜದ ಬಾಂಧವರು ಒಗ್ಗಟ್ಟಾಗಿ ನಾಡಿನ ಏಳಿಗೆಗಾಗಿ ಶ್ರಮಿಸುತ್ತಾ ತಾವು ಸಹ ಸಮಾಜದ ಮುನ್ನೆಲೆಯಲ್ಲಿ ಉತ್ತಮ ಹೆಸರನ್ನು ಮಾಡುವಂತಹ ಗಮನಹರಿಸಿ ಯಶಸ್ಸು ಸಾಧಿಸಬೇಕೆಂದು ತಮ್ಮ ಹಾರೈಕೆಯನ್ನು ತಿಳಿಸಿದರು. ಮೊಗೇರ ಸಮಾಜದವರು ನೀಡಿದ ಸನ್ಮಾನವನ್ನು ಆತ್ಮೀಯವಾಗಿ ಸ್ವೀಕರಿಸಿದ ಶಾಸಕರು, ಸಮಾಜ ಹಾಗೂ ಸಮಾಜ ಬಾಂಧವರ ನೀಳಿಗೆಗಾಗಿ ತಮ್ಮಿಂದಾಗುವ ಎಲ್ಲಾ ಸಹಾಯ ಮಾಡುವುದಾಗಿ ಭರವಸೆ ನೀಡಿದರು.