ವಿರಾಜಪೇಟೆ ಲೆಜೆಂಡ್ಸ್ ಕಪ್ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಭಾಗವಹಿಸಿದ ಶಾಸಕ ಎಎಸ್ ಪೊನ್ನಣ್ಣ

Apr 20, 2026 - 21:03
 0  192
ವಿರಾಜಪೇಟೆ ಲೆಜೆಂಡ್ಸ್  ಕಪ್ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಭಾಗವಹಿಸಿದ ಶಾಸಕ ಎಎಸ್ ಪೊನ್ನಣ್ಣ

ವಿರಾಜಪೇಟೆ;ಇಲ್ಲಿ ನಡೆಯುತ್ತಿರುವ, ಲೆಜೆಂಡ್ಸ್ ಕಪ್ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಯ ಮುಖ್ಯ ಅತಿಥಿಯಾಗಿ, ಕರ್ನಾಟಕ ರಾಜ್ಯ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿದರು.

ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಿದ ಶಾಸಕರು, ಇಂದಿನ ಯುವಕರು ಕ್ರಿಕೆಟ್ ನಲ್ಲಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವುದಕ್ಕೆ ಇಂತಹ ಟೂರ್ನಮೆಂಟ್ ಗಳು ಸಹಕಾರಿಯಾಗಲಿದೆ. ಜೀವನದ ಪಾಠವನ್ನು ಸಹ ಕ್ರಿಕೆಟ್ನಿಂದ ಕಲಿಯಬಹುದು. ಸವಾಲನ್ನು ಎದುರಿಸುವುದು ಹಾಗೂ ಸವಾಲುಗಳನ್ನು ಗೆಲ್ಲುವುದನ್ನು, ಕ್ರಿಕೆಟ್ ಮೂಲಕ ಕಲಿತು ನಿಜ ಜೀವನದಲ್ಲೂ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಿದರೆ ಎಲ್ಲರಿಗೂ ಯಶಸ್ಸು ಸಿಗುತ್ತದೆ ಎಂದು ಬಣ್ಣಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಉಪಾಧ್ಯಕ್ಷರು ನಾಸಿರ್, ಪ್ರಮುಖರು ಅಪ್ಪಣ್ಣ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 0