Kodagu

ಹುದಿಕೇರಿಯಲ್ಲಿ ಶಾಸಕ ಎಎಸ್ ಪೊನ್ನಣ್ಣ ಅವರಿಗೆ ಅದ್ಧೂರಿ ಸ್ವಾಗತ

admincoorgdaily

ಹುದಿಕೇರಿಯಲ್ಲಿ ಶಾಸಕ ಎಎಸ್ ಪೊನ್ನಣ್ಣ ಅವರಿಗೆ ಅದ್ಧೂರಿ ಸ್ವಾಗತ

ಪೊನ್ನಂಪೇಟೆ:ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರ ರಾಜಕೀಯ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ, ಮೊದಲ ಬಾರಿಗೆ ಪೊನ್ನಂಪೇಟೆ ತಾಲೂಕು ಹುದಿಕೇರಿಗೆ ಆಗಮಿಸುತ್ತಿರುವ ವಿರಾಜಪೇಟೆ ಶಾಸಕರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣರವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.

ಕೆಪಿಸಿಸಿ ಸದಸ್ಯರು, ಡಿಸಿಸಿ ಸದಸ್ಯರು, ಮಾನ್ಯ ಶಾಸಕರ ಸಹೋದರರಾದ ಅಜ್ಜಿಕುಟ್ಟಿರ ನರೇನ್ ಕಾರ್ಯಪ್ಪ, ಪೊನ್ನಂಪೇಟೆ ಅಧ್ಯಕ್ಷರಾದ ಮಿದೇರಿರ ನವೀನ್, ವಲಯ ಅಧ್ಯಕ್ಷರು ಚಂಗುಲಂಡ ಸೂರಜ್, ಹಿರಿಯರು ಪಿ ಕೆ ಪೊನ್ನಪ್ಪ, ಚೆಕ್ಕೇರ ವಾಸು ಕುಟ್ಟಪ್ಪ, ಸುಧೀರ್, ಅಜ್ಜಿಕುಟ್ಟಿರ ಗಿರೀಶ್, ಅಜ್ಜಿಕುಟ್ಟಿರ ಪಮ್ಮು,ಅಜ್ಜಿಕುಟ್ಟಿರ ಪೊನ್ನಪ್ಪ, ಚೆಕ್ಕೇರ ರಂಜಿ, ಮನೋಹರ್,ಸಚಿನ್, ಕಾವೇರಪ್ಪ, ಆಶಾ,ಕುಸುಮ, ಬಲ್ಯಮಾಡ ರೀಕ್ಷಿತ್, ಮದನ್ ಮಂದಣ್ಣ, ಉಪಸ್ಥಿತರಿದ್ದು ಮಾನ್ಯ ಶಾಸಕರನ್ನು ಜಯ ಘೋಷಗಳೊಂದಿಗೆ ಕ್ಷೇತ್ರಕ್ಕೆ ಬರಮಾಡಿಕೊಂಡರು. ನೂರಾರು ಸಂಖ್ಯೆಯಲ್ಲಿ ಜಮಾಹಿಸಿದ್ದ ಕಾರ್ಯಕರ್ತರು ಹಾಗೂ ನಾಯಕರು ಶಾಸಕರನ್ನು ಕಂಡೊಡನೆ ಆತ್ಮೀಯವಾಗಿ ಅವರನ್ನು ಅಭಿನಂದಿಸಿದರು.