Kodagu

ವಿರಾಜಪೇಟೆಯಲ್ಲಿ ಶಾಸಕ ಎಎಸ್ ಪೊನ್ನಣ್ಣ ಅವರಿಗೆ ಅದ್ಧೂರಿ ಸ್ವಾಗತ

admincoorgdaily

ವಿರಾಜಪೇಟೆಯಲ್ಲಿ ಶಾಸಕ ಎಎಸ್ ಪೊನ್ನಣ್ಣ ಅವರಿಗೆ ಅದ್ಧೂರಿ ಸ್ವಾಗತ

ವಿರಾಜಪೇಟೆ:ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರ ರಾಜಕೀಯ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ, ಮೊದಲ ಬಾರಿಗೆ ವಿರಾಜಪೇಟೆಗೆ ಆಗಮಿಸಿದ್ದ, ಶಾಸಕರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣರವರನ್ನು ಸಿಹಿ ತಿನ್ನಿಸಿ ಆತ್ಮೀಯವಾಗಿ ಅಭಿನಂದಿಸಿದರು.

ಈ ವೇಳೆ ಬ್ಲಾಕ್ ಅಧ್ಯಕ್ಷರಾದ ಪಟ್ಟಡ ರಂಜಿ ಪೂಣಚ್ಚ, ಮಹಿಳಾ ಅಧ್ಯಕ್ಷರು ನಯನಾ, ಉಪಾಧ್ಯಕ್ಷರು ಜೋಕಿಮ್, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಮಾಜಿ ಪುರಸಭೆ ಅಧ್ಯಕ್ಷರಾದ ದೇಚಮ್ಮ ಕಾಳಪ್ಪ, ಉಪಾಧ್ಯಕ್ಷರು ಫಸಿಯಾ ತಬ್ಸುಂ, ತಾಲೂಕು ಪ್ರಚಾರ ಸಮಿತಿಯ ಅಧ್ಯಕ್ಷರಾದ ಮತೀನ್,ಮುಖಂಡರಾದ ಶಬರೀಶ್ ಶೆಟ್ಟಿ, ಕಿರಣ್, ಕುಂದಾಚ್ಚಿರ ಮಂಜು ದೇವಯ್ಯ, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಶಬೀರ್, ಸಫನ್, ರಾಜೇಶ್ ನಾಯರ್, ಶಶಿ, ಜಗತ್, ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.