ಅಜ್ಜಿಕುಟ್ಟಿರ ಐನ್ ಮನೆಗೆ ಭೇಟಿ ನೀಡಿದ ಶಾಸಕ ಎಎಸ್ ಪೊನ್ನಣ್ಣ
ಪೊನ್ನಂಪೇಟೆ:ಕೊಡಗಿನ ಪ್ರತಿಷ್ಠಿತ ಕುಟುಂಬಗಳಲ್ಲಿ ಒಂದಾಗಿರುವ ಅಜ್ಜಿಕುಟ್ಟಿರ ಐನ್ ಮನೆಗೆ, ಸದ್ರಿ ಐನ್ ಮನೆಯು ಪೂರ್ಣಗೊಂಡ ಸಂದರ್ಭದಲ್ಲಿ, ಇಂದು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭೇಟಿ ನೀಡಿದರು.
ಕಳೆದ ವರ್ಷ ಅಜ್ಜಿಕುಟ್ಟಿರ ಐನ್ ಮನೆ ಕಾಮಗಾರಿಯನ್ನು ಕೈಗೆತ್ತುಕೊಂಡಿದ್ದ ಕುಟುಂಬಸ್ಥರು, ಇದೀಗ ಈ ಕಾಮಗಾರಿ ಪೂರ್ಣಗೊಂಡು, ಇಂದು ಶಾಸ್ತ್ರೋತ್ರವಾಗಿ ಐನ್ ಮನೆ ಕುಟುಂಬದ ತಕ್ಕರು, ಹಿರಿಯರು, ಪ್ರಮುಖರು ಹಾಗೂ ಊರವರ ಉಪಸ್ಥಿತಿಯಲ್ಲಿ ಐನ್ ಮನೆ ಪ್ರವೇಶ ಕಾರ್ಯಕ್ರಮ ಜರುಗಿತು.
ಸ್ವತಹ ಅಜ್ಜಿಕುಟ್ಟಿರ ಕುಟುಂಬದ ಕುಡಿ ಆಗಿರುವ ಶಾಸಕರು ತನ್ನ ಹಿರಿಕರು ನೆಲೆಸಿದ ಐನ್ ಮನೆಗೆ ಭೇಟಿ ನೀಡಿ ಗೌರವ ಸಲ್ಲಿಸುವುದರೊಂದಿಗೆ, ಅಲ್ಲಿಯ ಹಿರಿಯರೊಂದಿಗೆ ಹಲವು ಸಮಯ ಚರ್ಚಿಸಿದರು.
ಈ ಸಂದರ್ಭದಲ್ಲಿ ಅಜ್ಜಿಕುಟ್ಟಿರ ಕುಟುಂಬದ ಇತಿಹಾಸದ ಬಗ್ಗೆ ಮೆಲುಕು ಹಾಕಿದ ಶಾಸಕರು, ಹಿರಿಯರೊಂದಿಗೆ ಚರ್ಚಿಸುತ್ತಾ, ಕುಟುಂಬದ ಆಚರಣೆಗಳ ಬಗ್ಗೆ, ಆಚಾರ ವಿಚಾರಗಳ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಂಡರು.
ಈ ಸಂದರ್ಭದಲ್ಲಿ ಕುಟುಂಬದ ಅಧ್ಯಕ್ಷರಾದ ಸಜಾನ್, ಶಾಸಕ ದಂಪತಿಗಳಾದ ಶ್ರೀ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಹಾಗೂ ಶ್ರೀಮತಿ ಕಾಂಚನ್ ಪೊನ್ನಣ್ಣ, ಶಾಸಕರ ಹಿರಿಯ ಸಹೋದರ ಅಜ್ಜಿಕುಟ್ಟಿರ ನರೇನ್ ಎಸ್. ಕಾರ್ಯಪ್ಪ ರವರು ಕುಟುಂಬದ ಹಿರಿಯರಾದ ಪೊನ್ನಪ್ಪ, ಮಾದಪ್ಪ, ಪೂಣಚ್ಚ ಹಾಗೂ ಕುಟುಂಬದ ಸರ್ವ ಸದಸ್ಯರು ಉಪಸ್ಥಿತರಿದ್ದರು.