ಕಡಂಗಮರೂರು ಗ್ರಾಮದ ಕೋದಂಡ ಐನ್ ಮನೆಗೆ ಭೇಟಿ ನೀಡಿದ ಶಾಸಕ ಎಎಸ್ ಪೊನ್ನಣ್ಣ

ಕಡಂಗಮರೂರು ಗ್ರಾಮದ ಕೋದಂಡ ಐನ್ ಮನೆಗೆ ಭೇಟಿ ನೀಡಿದ ಶಾಸಕ ಎಎಸ್ ಪೊನ್ನಣ್ಣ

ವಿರಾಜಪೇಟೆ;ಕಡಂಗಮರೂರು ಗ್ರಾಮದ ಕೋದಂಡ ಐನ್ ಮನೆಗೆ, ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಹಾಗೂ ಶಾಸಕರ ಧರ್ಮಪತ್ನಿ ಶ್ರೀಮತಿ ಕಾಂಚನ್ ಪೊನ್ನಣ್ಣ ರವರು ಭೇಟಿ ನೀಡಿದರು. ಕಳೆದ ಬಾರಿ ಶಾಸಕರು ಈ ಭಾಗಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ತಮ್ಮ ಐನ್ ಮನೆಗೆ ಭೇಟಿ ನೀಡಬೇಕೆಂದು ಶಾಸಕರನ್ನು, ಕೋದಂಡ ಐನ್ ಮನೆ ಪ್ರಮುಖರು ಕೋರಿಕೊಂಡಿದ್ದರು.

ಕೋದಂಡ ಐನ್ ಮನೆ ಪ್ರಮುಖರ ಬೇಡಿಕೆಯನ್ನು ಶಾಸಕರು ಇಂದು ನೀಡಿದ ಸಂದರ್ಭ, ಕೋದಂಡ ಐನ್ ಮನೆಯ ಇತಿಹಾಸದ ಬಗ್ಗೆ ಅಲ್ಲಿಯ ಹಿರಿಯರಿಂದ ಮಾಹಿತಿ ಪಡೆದುಕೊಂಡರು. ಬಳಿಕ ಐನ್ ಮನೆಯವರ ಆತಿಥ್ಯ ಹಾಗೂ ಸನ್ಮಾನ ಸ್ವೀಕರಿಸಿ ಶುಭ ಕೋರಿದ ಶಾಸಕರು, ಅವರುಗಳು ನೀಡಿದ ಮನವಿಯನ್ನು ಪರಿಶೀಲಿಸಿ, ಮುಂದಿನ ದಿನಗಳಲ್ಲಿ ಐನ್ ಮನೆ ರಸ್ತೆ ಅಭಿವೃದ್ಧಿಗೆ ತನ್ನ ಕೈಲಾಗುವ ಸಹಾಯ ಮಾಡುವುದಾಗಿ ಭರವಸೆ ನೀಡಿದರು.

 ಈ ಸಂದರ್ಭದಲ್ಲಿ ಅಧ್ಯಕ್ಷರು ಕೋದಂಡ ಜೆಸ್ಸಿ ಅಪ್ಪಣ್ಣ, ಸದಸ್ಯರು ಸಂಪನ್ ಸೋಮಣ್ಣ,ಶಾನ್,ಅಜಯ್,ಸಿ ಬಿ ದೇವಯ್ಯ, ಸುರಾ ಅಯ್ಯಪ್ಪ, ಲೋಕೇಶ್ ಅಪ್ಪಯ್ಯ, ಪ್ರಭ, ಹಾಗೂ ಕೋದಂಡ ಕುಟುಂಬದ ಸರ್ವ ಸದಸ್ಯರು ಉಪಸ್ಥಿತರಿದ್ದರು.