ಪಂದ್ಯಂಡ ಐನ್ ಮನೆಗೆ ಶಾಸಕ‌ ಎಎಸ್ ಪೊನ್ನಣ್ಣ ಭೇಟಿ

Jan 25, 2026 - 14:21
 0  457
ಪಂದ್ಯಂಡ ಐನ್ ಮನೆಗೆ ಶಾಸಕ‌ ಎಎಸ್ ಪೊನ್ನಣ್ಣ ಭೇಟಿ

ವಿರಾಜಪೇಟೆ:ವಿರಾಜಪೇಟೆ ತಾಲೂಕಿನ ಬೊಳ್ಳುಮಾಡು ನಲ್ಲಿರುವ ಪಂದ್ಯಂಡ ಐನ್ ಮನೆಗೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ರವರು ಭೇಟಿ ನೀಡಿದರು.

ಶಾಸಕರ ಧರ್ಮಪತ್ನಿ ಶ್ರೀಮತಿ ಕಾಂಚನ್ ಪೊನ್ನಣ್ಣನವರ ಕುಟುಂಬದ ಮನೆ ಇದಾಗಿದ್ದು, ಮನೆ ನಿರ್ಮಾಣದ ವಾಸ್ತು ಪರಿಹಾರದ ಪೂಜಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

 ಪಂದ್ಯಂಡ ಕುಟುಂಬದ ಅಳಿಯರಾಗಿರುವ ಶಾಸಕರು, ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮುಂದೆ ಈ ಕುಟುಂಬದಲ್ಲಿ ಆಗುವ ಕಾರ್ಯಕ್ರಮಗಳಿಗೆ ತನ್ನ ಸಹಕಾರ ಇದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕುಟುಂಬದ ಪಟೇದಾರರಾದ ಪಿ ಪಿ ಪೆಮ್ಮಯ್ಯ ರವರು, ಕುಟುಂಬದ ಸದಸ್ಯರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0