ಮರ್ಸಿ ಹೋಮ್' ಹಾಗೂ ಪುರುಷರ ಸ್ನೇಹ ಭವನ್ ವೃದ್ಧಾಶ್ರಮದಲ್ಲಿ ಶಾಸಕ ಎಎಸ್ ಪೊನ್ನಣ್ಣ ಅವರ ಹುಟ್ಟು ಹಬ್ಬಾಚರಣೆ
admincoorgdaily

ವಿರಾಜಪೇಟೆ: ತಾಲೂಕಿನ ಹೆಗ್ಗಳ ಗ್ರಾಮದಲ್ಲಿರುವ ಮಹಿಳೆಯರ ಮರ್ಸಿ ಹೋಮ್' ಹಾಗೂ ಪುರುಷರ ಸ್ನೇಹ ಭವನ್ ವೃದ್ಧಾಶ್ರಮಕ್ಕೆ ತೆರಳಿ, ಅಲ್ಲಿಯ ನಿವಾಸಿಗಳೊಂದಿಗೆ ಕೇಕ್ ಕತ್ತರಿಸುವ ಮೂಲಕ ತಮ್ಮ ಜನ್ಮದಿನವನ್ನು ಆಚರಿಸಿದರು.
ಈ ಸಂದರ್ಭದಲ್ಲಿ ಅಲ್ಲಿಯ ನಿವಾಸಿಗಳ ಬೇಡಿಕೆಯಂತೆ ಅವರಿಗೆ ಫ್ಯಾನ್, ಟೇಬಲ್ ಹಾಗೂ ಟಿವಿಯನ್ನು ತನ್ನ ಸ್ವಂತ ವೆಚ್ಚದಲ್ಲಿ ನೀಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಶಾಸಕರ ಧರ್ಮಪತ್ನಿ ಶ್ರೀಮತಿ ಕಾಂಚನ್ ಪೊನ್ನಣ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ತಿತೀರ ಧರ್ಮಜ ಉತ್ತಪ್ಪ, ಜಿಲ್ಲಾ ಅಲ್ಪಸಂಖ್ಯಾತ ಘಟದ ಅಧ್ಯಕ್ಷರು ಹನೀಫ್, ತಾಲೂಕು ಘಟದ ಅಧ್ಯಕ್ಷರು ರಫೀಕ್, ಕುಂಡಚ್ಚಿರ ಮಂಜು ದೇವಯ್ಯ, ಮಾಜಿ ಪುರಸಭೆ ಸದಸ್ಯರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.