ಸಾರ್ವಜನಿಕರು ಮನೆ ನಿರ್ಮಾಣ ಮಾಡಿ ಸರಕಾರದ ಸೌಲಭ್ಯ ಸದುಪಯೋಗಪಡಿಸಿಕೊಳ್ಳಲು ಶಾಸಕ ಡಾ.ಮಂತರ್ ಗೌಡ ಕರೆ
admincoorgdaily
ಮಡಿಕೇರಿ:ಹೊದ್ದೂರು ಗ್ರಾಮ ಪಂಚಾಯಿತಿಯಲ್ಲಿ ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆಯ್ಕೆಯಾದ ಬಸವ ವಸತಿ ಯೋಜನೆ ಮತ್ತು ಅಂಬೇಡ್ಕರ್ ವಸತಿ ಯೋಜನೆಯಡಿ 26 ಫಲಾನುಭಾವಿಗಳಿಗೆ ಮಡಿಕೇರಿ ವಿಧಾನಸಭೆ ಕ್ಷೇತ್ರದ ಶಾಸಕರಾದ ಮಂತರ್ ಗೌಡ ಸರ್ ರವರು,ಗ್ರಾಮ ಪಂಚಾಯಿತಿ ಅಧ್ಯಕ್ಷರು ಸರ್ವ ಸದಸ್ಯರು ಅಧಿಕಾರಿಗಳು ಗ್ರಾಮಸ್ಥರ ಸಮ್ಮುಖದಲ್ಲಿ ವಸತಿ ನಿರ್ಮಾಣ ಕಾರ್ಯದೇಶ ಪತ್ರವನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.
ಸಾರ್ವಜನಿಕರು ಮನೆ ನಿರ್ಮಾಣ ಮಾಡಿ ಸರಕಾರದ ಸೌಲಭ್ಯ ಸದುಪಯೋಗಪಡಿಸಲು ಕರೆ ನೀಡಿದ ಶಾಸಕರು, ಹೆಚ್ಚುವರಿ ಮನೆ ಮಂಜೂರು ಮಾಡಲು ಸಹಕರಿಸಿದ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ರನ್ನು ಸ್ಮರಿಸಿಕೊಂಡ ಶಾಸಕರು ಪಾರದರ್ಶಕವಾಗಿ ಮನೆ ನೀಡಲಾಗಿದೆ. ಸರಕಾರದ ಉಚಿತ ವಸತಿ ಯೋಜನೆಗೆ ಯಾವುದೇ ಹಣ ಯಾರಿಗೂ ಫಲಾನುಭವಿಗಳು ನೀಡುವ ಅಗತ್ಯವಿಲ್ಲ ಎಂದು ತಿಳಿಸಿದರು.ಹಾಗೂ ಗ್ರಾಮ ಪಂಚಾಯತಿಅನುದಾನದಲ್ಲಿ 5 ಅಂಗನವಾಡಿ ಕೇಂದ್ರಗಳಿಗೆ ಸ್ಮಾರ್ಟ್ ಟಿವಿ ವಿತರಿಸಲಾಯಿತು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಹೆಚ್ಎ ಹಂಸ ಸದಸ್ಯರಾದ ಮೊಣ್ಣಪ್ಪ ,ಕುಸುಮಾವತಿ, ಚೌರಿರ ಅನಿತಾ ,ಮೈದು ಕೊಟ್ಟಮುಡಿ, ಎಂ ಬಿ ಹಮೀದ್ ಕಬಡಕೇರಿ, ತಾಲೂಕು ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮಂದ್ರೀರ ಮೋಹನ್ ದಾಸ್ ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಕೋಚನ ಹರಿಪ್ರಸಾದ್, ತಾಲ್ಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿ ಶೇಖರ್ , ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸೀತಾ ಲಕ್ಷ್ಮೀ, ಸಹಾಯಕ ಕಾರ್ಯ ಪಾಲಕ ಅಭಿಯಂತರರು ಲೋಕೋಪಯೋಗಿ ಪಂಚಾಯತಿ ರಾಜ್ ಇಲಾಖೆ, ಪಿಡಿಒ ಅಬ್ದುಲ್ಲಾ, ಕಂದಾಯ ನಿರೀಕ್ಷಕರು ಚಂದ್ರ ಪ್ರಸಾದ್ ಗ್ರಾಮ ಆಡಳಿತ ಅಧಿಕಾರಿ ಸಂತೋಷ್ ಪಾಟೀಲ್ ವಿವಿಧ ಇಲಾಖೆಯ ಅಧಿಕಾರಿಗಳು ಪಂಚಾಯತ್ ಸಿಬ್ಬಂದಿಗಳು ಗ್ರಾಮಸ್ಥರು ಹಾಜರಿದ್ದರು.