ಶಾಸಕ ವೀರೇಂದ್ರ ಪಪ್ಪಿ ಲಾಕರ್ ತೆರೆದ ED; 44 ಕೆಜಿ ಚಿನ್ನ ವಶ!

Oct 9, 2025 - 23:52
 0  960
ಶಾಸಕ ವೀರೇಂದ್ರ ಪಪ್ಪಿ ಲಾಕರ್ ತೆರೆದ ED; 44 ಕೆಜಿ ಚಿನ್ನ ವಶ!
Photo credit: oneindia Kannada (ಫೋಟೋ:ಶಾಸಕ ವೀರೇಂದ್ರ ಪಪ್ಪಿ)

ಬೆಂಗಳೂರು: ಅಕ್ರಮ ಬೆಟ್ಟಿಂಗ್ ಹಾಗೂ ಕ್ಯಾಸಿನೋ ವ್ಯವಹಾರ ಪ್ರಕರಣದಲ್ಲಿ ಬಂಧಿತರಾಗಿರುವ ಚಿತ್ರದುರ್ಗ ಕ್ಷೇತ್ರದ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಮತ್ತೊಂದು ಮಹತ್ವದ ಪತ್ತೆ ಮಾಡಿದೆ. ಅಧಿಕಾರಿಗಳು ಚಳ್ಳಕೆರೆ ತಾಲೂಕಿನ ಬ್ಯಾಂಕ್‌ ನ ಎರಡು ಲಾಕರ್‌ಗಳನ್ನು ಪರಿಶೀಲಿಸಿದಾಗ 44 ಕೆಜಿ ಚಿನ್ನ ಪತ್ತೆಯಾಗಿದ್ದು, ಇದರ ಮೌಲ್ಯ 50 ಕೋಟಿಗೂ ಅಧಿಕ ಎಂದು ಅಂದಾಜಿಸಲಾಗಿದೆ.

ಈ ಮೂಲಕ ಇಡಿಗೆ ವಶವಾಗಿರುವ ಪಪ್ಪಿ ಅವರ ಆಸ್ತಿ-ಪಾಸ್ತಿಗಳ ಒಟ್ಟು ಮೌಲ್ಯ 150 ಕೋಟಿಗೂ ಮೀರಿದೆ. ಇತ್ತೀಚಿನ ದಾಳಿಗಳಲ್ಲಿ 12 ಕೋಟಿ ರೂಪಾಯಿ ನಗದು, 6 ಕೋಟಿ ಮೌಲ್ಯದ ಚಿನ್ನ, ವಿದೇಶಿ ಕರೆನ್ಸಿ ಹಾಗೂ ಹಲವು ಆಸ್ತಿಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದರು.

ಅಕ್ರಮ ಆನ್‌ಲೈನ್ ಗೇಮ್ ಹಾಗೂ ಬೆಟ್ಟಿಂಗ್ ಆ್ಯಪ್‌ಗಳ ಮೂಲಕ ಹಣ ವರ್ಗಾವಣೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿಗೆ ಬಂದ ಸುಳಿವಿನ ಆಧಾರದ ಮೇಲೆ ದಾಳಿಗಳು ನಡೆದಿದ್ದವು.

ಸಿಕ್ಕಿಂನ ಗ್ಯಾಂಗ್ಟಕ್‌ನಲ್ಲಿ ಅಡಗಿಕೊಂಡಿದ್ದ ಪಪ್ಪಿಯವರನ್ನು ಕೊಲ್ಕತ್ತಾ ಇಡಿ ತಂಡ ಬಂಧಿಸಿ, ನಂತರ ಬೆಂಗಳೂರಿಗೆ ಕರೆತಂದು ಕೋರ್ಟ್ ಮುಂದೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯವು ಅವರನ್ನು 5 ದಿನಗಳ ಕಾಲ ಇಡಿ ಕಸ್ಟಡಿಗೆ ಒಪ್ಪಿಸಿತ್ತು. ಬಳಿಕ ವಿಚಾರಣೆ ನಡೆದು, ಆಗಸ್ಟ್ 28ರಂದು ವೀರೇಂದ್ರ ಪಪ್ಪಿ ಪರ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.

What's Your Reaction?

Like Like 1
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 1