Kodagu

ಮಡಿಕೇರಿ: ವಿದ್ಯಾರ್ಥಿ ನಿಲಯ ಆರಂಭ; ಬಾಡಿಗೆ ಕಟ್ಟಡ ಒದಗಿಸಲು ಮನವಿ

admincoorgdaily

ಮಡಿಕೇರಿ:-2024-25 ನೇ ಸಾಲಿನಲ್ಲಿ ನಗರದಲ್ಲಿ ಹೊಸದಾಗಿ ಮಂಜೂರಾಗಿರುವ ಪರಿಶಿಷ್ಟ ಪಂಗಡದ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ ಪ್ರಾರಂಭಿಸಲು ನಗರದೊಳಗೆ ಅಂದಾಜು 100 ವಿದ್ಯಾರ್ಥಿಗಳು ವಾಸವಿರಲು ಮೂಲಭೂತ ಸೌಕರ್ಯ ಹೊಂದಿರುವಂತಹ (ಶೌಚಾಲಯ, ಸ್ನಾನಗೃಹ, ಭೋಜನಾಲಯ, ಮಲಗುವ ಕೊಠಡಿ, ಅಡುಗೆ ಕೊಠಡಿ, ದಾಸ್ತಾನು ಕೊಠಡಿ) ಸುಸಜ್ಜಿತ ಕಟ್ಟಡವನ್ನು ಲೋಕೋಪಯೋಗಿ ಇಲಾಖೆಯವರು ನಿಗಧಿಪಡಿಸುವ ಬಾಡಿಗೆ ದರದಲ್ಲಿ ಒದಗಿಸಲು ಆಸಕ್ತಿ ಇರುವ ಕಟ್ಟಡ ಮಾಲೀಕರು ಆಗಸ್ಟ್, 15 ರೊಳಗೆ ಕಟ್ಟಡಕ್ಕೆ ಸಂಬಂಧಿಸಿದ ದಾಖಲೆಗಳೊಡನೆ ಕಚೇರಿಗೆ ತಮ್ಮ ಒಪ್ಪಿಗೆ ಪತ್ರವನ್ನು ಸಲ್ಲಿಸಬಹುದಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಕೋರಿದ್ದಾರೆ.