ಮಡಿಕೇರಿ: ಶ್ರೀ ಕೋದಂಡರಾಮ ದೇವಾಲಯದಲ್ಲಿ ಸ್ವಾತಂತ್ರ್ಯ ದಿನಾಚರಣೆ
ಮಡಿಕೇರಿ:ಮಲ್ಲಿಕಾರ್ಜುನ ನಗರದ ಶ್ರೀ ಕೋದಂಡರಾಮ ದೇವಾಲಯದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ನಗರಸಭಾ ಸದಸ್ಯರಾದ ಮುಸ್ತಫಾ ಅವರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದ ದೇವಾಲಯದ ಟ್ರಸ್ಟಿನ ಪದಾಧಿಕಾರಿಗಳು ರಾಮಾ ಸೇವಾ ಸಮಿತಿ ಪದಾಧಿಕಾರಿಗಳು ಜ್ಯೋತಿ, ಯುವಕ ಸಂಘದ ಸದಸ್ಯರು ಹಾಗೂ ನಗರದ ನಿವಾಸಿಗಳು ಪಾಲ್ಗೊಂಡಿದ್ದರು. ಮುಸ್ತಫಾ ಅವರು ಸ್ವತಂತ್ರ ದಿನಾಚರಣೆಯ ಬಗ್ಗೆ ಮಾತನಾಡಿ ಎಲ್ಲರಿಗೂ ಸಿಹಿ ಹಂಚಿದರು.