Kodagu

ಮಡಿಕೇರಿ:ರಸ್ತೆಯಲ್ಲಿ ಬಿದ್ದು ಸಿಕ್ಕ ಚಿನ್ನದ ಸರ!: ಸೂಕ್ತ ದಾಖಲೆಗಳನ್ನು ನೀಡಿ ಪಡೆದುಕೊಳ್ಳಲು ಪೊಲೀಸ್ ಇಲಾಖೆ ಪ್ರಕಟಣೆ

admincoorgdaily

ಮಡಿಕೇರಿ: ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕೊಹಿನೂರ್ ರಸ್ತೆಯಲ್ಲಿರುವ ಎಸ್‌ಬಿಐ ಬ್ಯಾಂಕ್‌ ಎದುರಿನ ಆಟೋ ನಿಲ್ದಾಣದ ಸಮೀಪದಲ್ಲಿ ದಿನಾಂಕ: 21-08-2025 ರಂದು ತಾಳತ ಮನೆ ನಿವಾಸಿಯಾದ ಶ್ರೀಮತಿ ಪಿ.ನಿತ್ಯಾ ಕುಮಾರಿ ಎಂಬುವವರಿಗೆ ಚಿನ್ನದ ಸರವೊಂದು ಸಿಕ್ಕಿದ್ದು, ಸದರಿಯವರು ಚಿನ್ನದ ಸರವನ್ನು ಪೊಲೀಸ್ ಕಂಟ್ರೋಲ್ ರೂಮ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ.ಎಂ.ಕೆ ದಿಲೀಪ್‌ ಕುಮಾ‌ರ್, ಎಎಸ್‌ಐ ರವರಿಗೆ ನೀಡಿದ್ದಾರೆ.

ರಸ್ತೆಯಲ್ಲಿ ಸಿಕ್ಕಂತಹ ಚಿನ್ನದ ಸರವನ್ನು ಸುರಕ್ಷಿತವಾಗಿ ಪೊಲೀಸ್ ಸಿಬ್ಬಂದಿಯವರಿಗೆ ನೀಡಿದ ತಾಳಮನೆ ನಿವಾಸಿಯಾದ ಪಿನಿತ್ಯಾ ಕುಮಾರಿ ರವರಿಗೆ ಹಾಗೂ .ಎಂ.ಕೆ ದಿಲೀಪ್‌ ಕುಮಾರ್, ಎಎಸ್‌ಐ. ಪೊಲೀಸ್‌ ಕಂಟ್ರೋಲ್ ರೂಮ್. ಮಡಿಕೇರಿ ರವರಿಗೆ ಕೆ. ರಾಮರಾಜನ್‌, ಐಪಿಎಸ್, ಪೊಲೀಸ್ ಅಧೀಕ್ಷಕರು. ಕೊಡಗು ಜಿಲ್ಲೆ, ಮಡಿಕೇರಿ ಮತ್ತು ಶ್ರೀ. ಬಿ.ಪಿ.ದಿನೇಶ್ ಕುಮಾ‌ರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ, ಮಡಿಕೇರಿ ರವರು ಅಭಿನಂದನೆಯನ್ನು ತಿಳಿಸಿದ್ದಾರೆ. ಸದರಿ ಚಿನ್ನದ ಸರವನ್ನು ಕಳೆದುಕೊಂಡ ವಾರಸುದಾರರು ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ ರವರ ಮೊಬೈಲ್‌ ಸಂಖ್ಯೆ: 9480804901 ಗೆ ಕರೆ ಮಾಡಿ ಸೂಕ್ತ ಮಾಹಿತಿ ಹಾಗೂ ದಾಖಲೆಗಳನ್ನು ನೀಡಿ ಜಿಲ್ಲಾ ಪೊಲೀಸ್‌ ಕಛೇರಿ, ಮಡಿಕೇರಿಯಲ್ಲಿ ಪಡೆದುಕೊಳ್ಳುವಂತೆ ಸಾರ್ವಜನಿಕರಲ್ಲಿ ಕೋರಿದೆ.