ಮಡಿಕೇರಿ: SDPI ವತಿಯಿಂದ ಸ್ವಾತಂತ್ರ್ಯ ದಿನಾಚರಣೆ
admincoorgdaily
ಮಡಿಕೇರಿ:ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಕೊಡಗು ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಪಕ್ಷದ ಮಡಿಕೇರಿಯ ಜಿಲ್ಲಾ ಕಚೇರಿಯಲ್ಲಿ ದ್ವಜಾರೋಹಣ ನೆರವೇರಿಸಿ ಆಚರಿಸಲಾಯಿತು. SDPI ಪಕ್ಷದ ಜಿಲ್ಲಾ ಅಧ್ಯಕ್ಷರಾದ ಅಮೀನ್ ಮೊಹ್ಸಿನ್ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
SDPI ಮಡಿಕೇರಿ ನಗರಸಭೆ ಸದಸ್ಯರು ಮತ್ತು SDPI ಜಿಲ್ಲಾ ಉಪಾಧ್ಯಕ್ಷರಾದ ಮನ್ಸೂರ್ ಅಲಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಸುಂಟಿಕೊಪ್ಪ, ವಿಮೆನ್ ಇಂಡಿಯಾ ಮೊಮೆಂಟ್ ಜಿಲ್ಲಾಧ್ಯಕ್ಷರಾದ ಸಲಿಕತ್ ದಿನದ ಸಂದೇಶ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಪಕ್ಷದ ಜಿಲ್ಲಾ ಸಮಿತಿ ಸದಸ್ಯರುಗಳು ಮಡಿಕೇರಿ ನಗರ ಸಮಿತಿ ಸದಸ್ಯರುಗಳು ಮತ್ತು ಕಾರ್ಯಕರ್ತರು ಹಾಜರಿದ್ದರು. ಕಾರ್ಯಕ್ರಮವನ್ನು ಮಡಿಕೇರಿ ನಗರ ಉಪಾಧ್ಯಕ್ಷರಾದ ಮೈಕಲ್ ವೇಗಸ್ ರವರು ನಿರೂಪಿಸಿ ವಂದಿಸಿದರು.