ಮಡಿಕೇರಿ: ಕಟ್ಟಡ ಬಾಡಿಗೆಗೆ ನೀಡಲು ಮನವಿ
ಮಡಿಕೇರಿ:-ನಗರದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಕಾರ್ಯನಿರ್ವಹಿಸುತ್ತಿರುವ 100 ಸಂಖ್ಯಾಬಲವುಳ್ಳ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ, ಮಡಿಕೇರಿ ನಗರ ಬಿಸಿಡಬ್ಲ್ಯೂಡಿ-2641 ಇಲ್ಲಿನ ವಿದ್ಯಾರ್ಥಿಗಳು ವಾಸಕ್ಕೆ ಸೂಕ್ತ ಮೂಲಭೂತ ಸೌಕರ್ಯವುಳ್ಳ ನೀರಿನ ವ್ಯವಸ್ಥೆ, ವಿದ್ಯುತ್, ಸುತ್ತುಗೋಡೆ, ಶೌಚಾಲಯ, ಸ್ನಾನದ ಗೃಹಗಳ ವ್ಯವಸ್ಥೆ ಹೊಂದಿದ್ದು, ಕಟ್ಟಡಕ್ಕೆ ಸಂಬಂದಿಸಿದಂತೆ ಮೂಲ ದಾಖಲೆಗಳಿರುವ ಸೂಕ್ತ ಕಟ್ಟಡ ಅಥವಾ ಮನೆ ಕೂಡಲೇ ಬಾಡಿಗೆಗೆ ಬೇಕಾಗಿದೆ. ಹೆಚ್ಚಿನ ಮಾಹಿತಿಗೆ ದೂ.ಸಂ.8762476790 ನ್ನು ಸಂಪರ್ಕಿಸಬಹುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲ್ಲೂಕು ಅಧಿಕಾರಿ ಮೋಹನ್ ಕುಮಾರ್ ತಿಳಿಸಿದ್ದಾರೆ.