Kodagu

ಮಡಿಕೇರಿ;ಮೇ 31ರಂದು ಶ್ರೀ ಮುತ್ತಪ್ಪ ದೇವಾಲಯದಲ್ಲಿ ಶ್ರೀ ಭಗವತಿ ದೇವಿಯ ವಾರ್ಷಿಕ ಪೊಂಗಾಲ ಉತ್ಸವ

admincoorgdaily

ಮಡಿಕೇರಿ;ಮೇ 31ರಂದು ಶ್ರೀ ಮುತ್ತಪ್ಪ ದೇವಾಲಯದಲ್ಲಿ ಶ್ರೀ ಭಗವತಿ ದೇವಿಯ ವಾರ್ಷಿಕ ಪೊಂಗಾಲ ಉತ್ಸವ

ಮಡಿಕೇರಿ: ನಗರದ ಶ್ರೀ ಮುತ್ತಪ್ಪ ದೇವಾಲಯದಲ್ಲಿ ಶ್ರೀ ಭಗವತಿ ದೇವಿಯ ವಾರ್ಷಿಕ ಪೊಂಗಾಲ ಉತ್ಸವ ಮೇ 31ರಂದು ಬೆಳಿಗ್ಗೆ ೮.೩೦ಕ್ಕೆ ವಿಜೃಂಭಣೆಯಿಂದ ನಡೆಯಲಿದೆ ಎಂದು ಮಹಿಳಾ ವೇದಿಕೆ ಅಧ್ಯಕ್ಷೆ ಶಾರದ ತಿಳಿಸಿದ್ದಾರೆ.

 ಪಾರ್ವತಿ, ಸರಸ್ವತಿ, ಮಹಾಲಕ್ಷ್ಮಿ, ದುರ್ಗಿ ಸಂಕಲ್ಪದ ದೇವಿಗೆ ಮಹಿಳೆಯರು ಮಾತ್ರ ನಡೆಸುವ ಈ ಪುಣ್ಯ ಸೇವೆಯಿಂದ ಮನೆಯಲ್ಲಿ ಆರೋಗ್ಯ, ಶಾಂತಿ ನೆಲೆಸುತ್ತದೆ. ಸೇವೆ ಮಾಡುವವರು ಮೂರು ದಿನ ವೃತ ಆಚರಿಸಬೇಕು. ಪೊಂಗಾಲದ ಸಾಮಗ್ರಿಗಳನ್ನು ದೇವಸ್ಥಾನದಿಂದಲೇ ನೀಡಲಾಗುವುದು.

ಮಾಹಿತಿಗೆ ೯೪೪೯೪೦೨೦೪೫, ೯೬೬೩೯೭೩೫೫೯ ಸಂಪರ್ಕಿಸಿ ಎಂದು ಕೋರಿದರು. ಸುದ್ದಿಗೋಷ್ಠಿಯಲ್ಲಿ ಮುತ್ತಪ್ಪ ದೇವಾಲಯ ಸಮಿತಿ ಅಧ್ಯಕ್ಷ ಟಿ.ಕೆ.ಸುಧೀರ್, ರವೀಂದ್ರ ರೈ, ರಮ್ಯ ರಮೇಶ್, ದೀಪಾ ಕಾವೇರಪ್ಪ, ಉಪಸ್ಥಿತರಿದ್ದರು.