Kodagu

ಮಡಿಕೇರಿ;ಆಟೋ ಮಾಲೀಕ ಚಾಲಕರ ಸಂಘದ ವತಿಯಿಂದ ಗಣರಾಜ್ಯೋತ್ಸವದ ಪ್ರಯುಕ್ತ ಏಪ್ರಿಲ್ ತಿಂಗಳಲ್ಲಿ ಕ್ರೀಡಾಕೂಟ ಮತ್ತು ಡ್ಯಾನ್ಸ್ ಮೇಳ

admincoorgdaily

ಮಡಿಕೇರಿ;ಆಟೋ ಮಾಲೀಕ ಚಾಲಕರ ಸಂಘದ ವತಿಯಿಂದ ಗಣರಾಜ್ಯೋತ್ಸವದ ಪ್ರಯುಕ್ತ ಏಪ್ರಿಲ್ ತಿಂಗಳಲ್ಲಿ ಕ್ರೀಡಾಕೂಟ ಮತ್ತು ಡ್ಯಾನ್ಸ್ ಮೇಳ

ಮಡಿಕೇರಿ: ಆಟೋ ಮಾಲೀಕ ಚಾಲಕರ ಸಂಘದ ವತಿಯಿಂದ ಗಣರಾಜ್ಯೋತ್ಸವದ ಪ್ರಯುಕ್ತ ಏಪ್ರಿಲ್ ತಿಂಗಳಲ್ಲಿ ಕ್ರೀಡಾಕೂಟ ಮತ್ತು ಡ್ಯಾನ್ಸ್ ಮೇಳವನ್ನು ಮಡಿಕೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಡಿ.ಎಚ್.ಮೇದಪ್ಪ ತಿಳಿಸಿದರು.

ಆಟೋ ಚಾಲಕರಿಗಾಗಿ ಏ.೫, ೬, ಮತ್ತು ೭ರಂದು ನಗರದ ಮ್ಯಾನ್ ಕಾಂಪೌಂಡ್ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾಟ ಹಮ್ಮಿಕೊಳ್ಳಲಾಗಿದೆ. ಭಾಗವಹಿಸುವ ಆಟೋ ಚಾಲಕರು ಸ್ಥಳೀಯ ಸ್ಥಾನೀಯ ಸಮಿತಿಯಲ್ಲಿ ಸಕ್ರಿಯ ಕಾರ್ಯಕರ್ತರು ಅಥವಾ ಸದಸ್ಯರಾಗಿರಬೇಕು ಎಂದು ತಿಳಿಸಿದ್ದಾರೆ. ಏ.೧೨ ರಂದು ಬೆಳಿಗ್ಗೆ ಮಕ್ಕಳಿಗೆ, ಮಹಿಳೆಯರಿಗೆ, ಸಾರ್ವಜನಿಕರಿಗೆ ಹಾಗೂ ಆಟೋ ಚಾಲಕರಿಗಾಗಿ ವಿವಿಧ ಆಟೋಟ ಸ್ಪರ್ಧೆಗಳು ನಗರದ ಗಾಂದಿ ಮೈದಾನದಲ್ಲಿ ನಡೆಯಲಿದೆ.

ಸಂಜೆ ೬ ಗಂಟೆಗೆ ಡ್ಯಾನ್ಸ್ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಆಟೋ ಮಾಲೀಕ ಚಾಲಕರ ಸಂಘದ ಮಡಿಕೇರಿ ನಗರಾಧ್ಯಕ್ಷ ಎ.ಸಮ್ಮದ್, ಪ್ರಧಾನ ಕಾರ್ಯದರ್ಶಿ ದಿನೇಶ್, ಖಂಜಾಚಿ ಎಚ್.ಎಸ್.ನಾಗರಾಜು, ಸಂಘಟನಾ ಕಾರ್ಯದರ್ಶಿಗಳಾದ ಮುದ್ದನ ಪ್ರವೀಣ್, ಕೆ.ಕೆ.ಸುಕುಮಾರ್ ಇದ್ದರು.