ಮಡಿಕೇರಿ: ಡಿಸೆಂಬರ್ 25ರಂದು ಬಾಲಸಂಗಮ

Dec 23, 2025 - 18:43
 0  199
ಮಡಿಕೇರಿ: ಡಿಸೆಂಬರ್ 25ರಂದು ಬಾಲಸಂಗಮ

ಮಡಿಕೇರಿ: ಬಾಲಗೋಕುಲ - ಮಡಿಕೇರಿ ಹಾಗೂ ಮುಳಿಯ ಪ್ರತಿಷ್ಠಾನದ ಸಹಯೋಗದೊಂದಿಗೆ ಡಿಸೆಂಬರ್ 25 ರಂದು "ಬಾಲಸಂಗಮ" ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಮಧ್ಯಾಹ್ನ 2:00 ಗಂಟೆಯಿಂದ ಪ್ರಾರಂಭವಾಗಿ ಸಂಜೆ 5.00 ಗಂಟೆಯವರಗೆ ನಡೆಯಲಿದೆ.

ಮುಳಿಯ ಜ್ಯುವೆಲ್ಸ್ ಸಭಾಂಗಣದಲ್ಲಿ ನಡೆಯಲಿರುವ ಈ ಬಾಲ ಸಂಗಮವು ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ಇದೊಂದು ವೇದಿಕೆಯಾಗಿದೆ. 6 ವಯಸ್ಸಿನಿಂದ 15 ವಯಸ್ಸಿನ ಒಳಗಿರುವ ಎಲ್ಲಾ ಮಕ್ಕಳು ಇದರಲ್ಲಿ ಭಾಗವಹಿಸಬಹುದು. ಕಾರ್ಯಕ್ರಮದಲ್ಲಿ ಭಾಗವಹಿಸಲಿಚ್ಚಿಸುವವರು ಈ‌ ಮೊಬೈಲ್ ಸಂಖ್ಯೆಗಳನ್ನು: 9481858609 ಸಂಪರ್ಕಿಸಬೇಕಾಗಿ ಕೋರಲಾಗಿದೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0