ಮಡಿಕೇರಿ: ಬಸ್ ಸ್ಟಾಂಡ್ ರಸ್ತೆ ಏಕಮುಖ ವಾಹನ ಸಂಚಾರಕ್ಕೆ ಮುಕ್ತ"

Jul 29, 2026 - 16:49
 0  213
ಮಡಿಕೇರಿ: ಬಸ್ ಸ್ಟಾಂಡ್ ರಸ್ತೆ ಏಕಮುಖ ವಾಹನ ಸಂಚಾರಕ್ಕೆ ಮುಕ್ತ"

ಮಡಿಕೇರಿ: ಮಡಿಕೇರಿ ನಗರದ ಸಂಚಾರ ದಟ್ಟಣೆ ನಿವಾರಣೆ ಹಿನ್ನೆಲೆಯಲ್ಲಿ ಬಸ್ ಸ್ಟಾಂಡ್ ರಸ್ತೆಯನ್ನು ಏಕಮುಖ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ನಗರಸಭೆ ಉಪಾಧ್ಯಕ್ಷ ಮಹೇಶ್ ಜೈನಿ ಮಾಹಿತಿ ನೀಡಿದ್ದು, ಹಳೇ ಖಾಸಗಿ ಬಸ್ ನಿಲ್ದಾಣದಿಂದ ಕೆಳಗಡೆಗೆ ಸಾಗಲು ಈ ಏಕಮುಖ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದರು.

ಈ ರಸ್ತೆಯಲ್ಲಿ ಬಸ್ ಸೇರಿದಂತೆ ಲಘು ವಾಹನಗಳಿಗೆ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಆದರೆ ಟ್ಯಾಂಕರ್ ಹಾಗೂ ಲೋಡ್ ಗಾಡಿಗಳಿಗೆ ಸದ್ಯಕ್ಕೆ ಸಂಚಾರಕ್ಕೆ ಅವಕಾಶವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಸಾರ್ವಜನಿಕರು ಹೊಸ ಸಂಚಾರ ವ್ಯವಸ್ಥೆಗೆ ಸಹಕರಿಸಬೇಕು ಎಂದು ನಗರಸಭೆ ಮನವಿ ಮಾಡಿದೆ. --

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 0