ಮಡಿಕೇರಿ:ಮದ್ಯಪಾನ ಮಾಡಿ ವಾಹನಗಳಿಗೆ ಡಿಕ್ಕಿಪಡಿಸಿದ ಡ್ರೈವರ್ ವಿರುದ್ಧ ಪ್ರಕರಣ ದಾಖಲು

ಮಡಿಕೇರಿ:ಮದ್ಯಪಾನ ಮಾಡಿ ವಾಹನಗಳಿಗೆ ಡಿಕ್ಕಿಪಡಿಸಿದ ಡ್ರೈವರ್ ವಿರುದ್ಧ ಪ್ರಕರಣ ದಾಖಲು

ಮಡಿಕೇರಿ, ಡಿ 30: ಡಿ.27ರಂದು ರಾತ್ರಿ 10.20ಗಂಟೆಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಇಬ್ನಿವಳವಾಡಿ ಗ್ರಾಮದ ಹೆದ್ದಾರಿಯಲ್ಲಿ ಅಕ್ಷಯ್ ಕುಮಾರ್ ಎಂಬಾತನು ಅತಿವೇಗ ಹಾಗೂ ಅಜಾಗೂಕತೆಯಿಂದ ಜೀಪ್ ಚಲಾಯಿಸಿ ಅಪಘಾತ ಪಡಿಸಿ ಮೂರು ವಾಹನಗಳು ಜಖಂಗೊಂಡಿದ್ದು, ಅಪಘಾತ ಪಡಿಸಿದ ಕೆಎ 23 ಎಂ 5928 ರ ಜೀಪ್‌ನ ಚಾಲಕನಾದ ಅಕ್ಷಯ್ ಕುಮಾರ್ ಎಂಬಾತನು ಮದ್ಯಪಾನ ಮಾಡಿ ವಾಹನ ಚಲಾಯಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿದೆ.

 ಮದ್ಯಪಾನ ಮಾಡಿ ರಸ್ತೆಯಲ್ಲಿ ವಾಹನ ಚಲಾಯಿಸುವ ಸಂದರ್ಭ ಅಪಘಾತವಾದಲ್ಲಿ ಜೀವಕ್ಕೆ ಹಾನಿಯುಂಟಾಗುವ ಬಗ್ಗೆ ಅರಿವಿದ್ದರೂ ಸಹ ಮಧ್ಯಪಾನ ಮಾಡಿ ಅತಿವೇಗ & ಚಾಲನೆ ಮಾಡಿದ್ದ ಜೀಪ್ ಚಾಲಕನಾದ ಅಕ್ಷಯ್ ಕುಮಾರ್ ವಿರುದ್ಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ: 281, 125 (ಎ) 110 ಬಿ.ಎನ್.ಎಸ್ ಅಕ್ಸ್ & 187 ಐಎಂವಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಹಾಗೂ ಬೋಯಿಕೇರಿ ಗ್ರಾಮದ ನಿವಾಸಿಯಾದ ಆರೋಪಿ ಅಕ್ಷಯ್ ಕುಮಾರ್, 26 ವರ್ಷ ಎಂಬಾತನನ್ನು ದಸ್ತಗಿರಿ ಮಾಡಿ ಘನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ‌.