Kodagu

ಮಡಿಕೇರಿ ನಗರ ಮಾಜಿ ಸೈನಿಕರ ಸಂಘದಿಂದ ಕಾಗಿ೯ಲ್ ವಿಜಯ್ ದಿವಸ್

admincoorgdaily

ಮಡಿಕೇರಿ ನಗರ ಮಾಜಿ ಸೈನಿಕರ ಸಂಘದಿಂದ ಕಾಗಿ೯ಲ್ ವಿಜಯ್ ದಿವಸ್

ಮಡಿಕೇರಿ ಜು 26 - ಮಡಿಕೇರಿ ನಗರ ಮಾಜಿ ಸೈನಿಕರ ಸಂಘದ ವತಿಯಿಂದ ಜನರಲ್ ತಿಮ್ಮಯ್ಯ ಸ್ಮಾರಕ ಭವನದ ಅಮರ್ ಜವಾನ್ ಸ್ಮಾರಕದಲ್ಲಿ ಕಾಗಿ೯ಲ್ ಕದನದ ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದರು. ಭಾರತೀಯ ಯೋಧರು 27 ವಷ೯ಗಳ ಮೊದಲು ಕಾಗಿ೯ಲ್ ಕದನದಲ್ಲಿ ತೋರಿದ್ದ ಪರಾಕ್ರಮವನ್ನು ಮಾಜಿ ಸೈನಿಕರು ಈ ಸಂದಭ೯ ಸ್ಮರಿಸಿಕೊಂಡರು.

ಸಂಘದ ಅಧ್ಯಕ್ಷ ಪಾಣಿಕುಟ್ಟೀರ ಕುಟ್ಟಪ್ಪ ನೇತೖತ್ವದಲ್ಲಿ ಆಯೋಜಿತ ಕಾಯ೯ಕ್ರಮದಲ್ಲಿ ಆಮಿ೯ ಕ್ಯಾಂಟೀನ್ ಹಿರಿಯ ವ್ಯವಸ್ಥಾಪಕ ಲೆಫ್ಟಿನೆಂಟ್ ಕನ೯ಲ್ ಮುಳ್ಳೇರ ಕಾವೇರಿಯಪ್ಪ, ಕನ೯ಲ್ ಚೋಂದಮ್ಮ, ಕಾಯ೯ಕ್ರಮ ಸಂಚಾಲಕ ಪಿ.ಕೆ. ಕುಟ್ಟಪ್ಪ, ಕೆ.ಪಿ. ಮುತ್ತಣ್ಣ, ಸಂಘದ ಪದಾಧಿಕಾರಿಗಳು, ಸದಸ್ಯರು ಅಮರ್ ಜವಾನ್ ಸ್ಮಾರಕಕ್ಕೆ ಪುಪ್ಪ ನಮನ ಸಲ್ಲಿಸಿದರು.