ಮಡಿಕೇರಿ: ಸಂಚಾರಿ ನಿಯಮ ಉಲ್ಲಂಘನೆ,ಚಾಲಕನಿಗೆ ಮೂರು ಸಾವಿರ ರೂ ದಂಡ

May 31, 2026 - 09:56
 0  1.2k
ಮಡಿಕೇರಿ: ಸಂಚಾರಿ ನಿಯಮ ಉಲ್ಲಂಘನೆ,ಚಾಲಕನಿಗೆ ಮೂರು ಸಾವಿರ ರೂ ದಂಡ
ಸಾಂದರ್ಭಿಕ ಚಿತ್ರ

ಮಡಿಕೇರಿ, ಮೇ 30: ಸಂಚಾರಿ ನಿಯಮ ಉಲ್ಲಂಘಿಸಿದ ಹಿನ್ನೆಲೆ ಮಡಿಕೇರಿ ನಗರ ಸಂಚಾರಿ ಪೊಲೀಸರು ಕಾರು ಚಾಲಕನಿಗೆ ದಂಡ ವಿಧಿಸಿ ಕ್ರಮಕೈಗೊಂಡಿದ್ದಾರೆ. ನಗರದಲ್ಲಿ ಅತೀ ವೇಗವಾಗಿ ವಾಹನ ಚಲಾಯಿಸುತ್ತಿದ್ದ ಇನೋವಾ ಕಾರನ್ನು ಪತ್ತೆಹಚ್ಚಿದ ಸಂದರ್ಭ ಚಾಲಕ ಡ್ರೈವಿಂಗ್ ಲೈಸನ್ಸ್ ಹೊಂದಿಲ್ಲದಿರುವುದು ಕಂಡುಬಂದಿದೆ.

ಅತೀ ವೇಗದ ಚಾಲನೆಗೆ ಮೋಟ‌ರ್ ವಾಹನ ಕಾಯ್ದೆ ಅನ್ವಯ ರೂ. 3 ಸಾವಿರ ದಂಡ ವಿಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ತಿಳಿಸಿದ್ದಾರೆ.

What's Your Reaction?

Like Like 3
Dislike Dislike 1
Love Love 1
Funny Funny 0
Angry Angry 0
Sad Sad 1
Wow Wow 0