"ಮೋಸ ಮೋಸ ಮೋಸ" ಮಡಿಕೇರಿ ದಸರಾ ವೇದಿಕೆಯಲ್ಲಿ ಹುಚ್ಚಾಟ

ಮಡಿಕೇರಿ: ದಶಮಂಟಪಗಳ ಸ್ಪರ್ಧೆಯಲ್ಲಿ ಮೋಸ ಎಂದು ಆರೋಪಿಸಿ ಕರವಲೆ ಭಗವಟಿ ಮಂಟಪ ಸದಸ್ಯರು ಮೋಸ ಮೋಸ ಎಂದು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದರು. ವೇದಿಕೆಯಲ್ಲಿದ್ದ ಪ್ರಶಸ್ತಿ ಫಲಕ ಹಾಗೂ ಪರಿಕರಗಳನ್ನು ಎತ್ತಿ ಎಸೆದಿದ್ದು,ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು.