ಮಡಿಕೇರಿ:ಗಾಂಜಾ, MDMA ಮಾರಾಟ ಐವರ ಬಂಧನ

Feb 20, 2026 - 19:20
Feb 20, 2026 - 19:33
 0  2.5k
ಮಡಿಕೇರಿ:ಗಾಂಜಾ, MDMA ಮಾರಾಟ ಐವರ ಬಂಧನ

ಮಡಿಕೇರಿ: ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಕ್ರಮವಾಗಿ ನಿಷೇಧಿತ ಮಾದಕ ವಸ್ತುಗಳ ಮಾರಾಟ /ಸರಬರಾಜು ಮಾಡುತ್ತಿದ್ದ ವ್ಯಕ್ತಿಗಳನ್ನು ಪತ್ತೆ ಹಚ್ಚುವಲ್ಲಿ ಕೊಡಗು ಜಿಲ್ಲಾ ಪೊಲೀಸ್ ಯಶಸ್ವಿಯಾಗಿದೆ.

ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಮಾರಾಟದ ಬಗ್ಗೆ ನಮ್ಮ ಕಛೇರಿ /ಠಾಣೆಗಳಿಗೆ ಸಾರ್ವಜನಿಕರಿಂದ ದೂರು ಬರುತ್ತಿದ್ದು, ನಿಷೇಧಿತ ಮಾದಕ ವಸ್ತುಗಳ ಮಾರಾಟ/ಸರಬರಾಜು/ ಬಳಕೆಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಿಗ್ಗಾಲು ಗ್ರಾಮದಲ್ಲಿ ನಿಷೇಧಿತ ಮಾದಕ ವಸ್ತು ಗಾಂಜಾ ಮಾರಾಟ/ಸೇವನೆ ಕುರಿತು ಖಚಿತ ಮಾಹಿತಿ ಹಿನ್ನೆಲೆಯಲ್ಲಿ ದಿನಾಂಕ: 18-02-2026 ರಂದು ದಾಳಿ ನಡೆಸಿ 02 ಆರೋಪಿಗಳು ಹಾಗೂ ಕಡಗದಾಳು ಗ್ರಾಮದಲ್ಲಿ ದಿನಾಂಕ: 19-02-2026 ರಂದು ದಾಳಿ ನಡೆಸಿ 03 ಜನ ಆರೋಪಿಗಳನ್ನು ನಿಷೇಧಿತ ಮಾದಕ ವಸ್ತುವಿನೊಂದಿಗೆ ದಸ್ತಗಿರಿ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗಿರುತ್ತದೆ. ಸದರಿ ಆರೋಪಿಗಳ ವಿರುದ್ಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ: 20(b), 22 NDPS Act ಅಡಿಯಲ್ಲಿ ಎರಡು ಪತ್ಯೇಕ ಪ್ರಕರಣಗಳನ್ನು ದಾಖಲಿಸಿ ಘನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.

ಆರೋಪಿಗಳ ವಿವರ; 1. ಕಾರ್ತಿಕ್, 27 ವರ್ಷ, ಕಿಗ್ಗಾಲು ಗ್ರಾಮ. ಮಡಿಕೇರಿ ತಾ॥ (ಗಾಂಜಾ ಮಾರಾಟ) 2. ಹರ್ಷವರ್ಧನ್.ಹೆಚ್.ಜಿ, 26 ವರ್ಷ, ಬಲಮುರಿ ಗ್ರಾಮ, ಮಡಿಕೇರಿ ತಾ 3. ಸಾಜೀರ್, 39 ವರ್ಷ, ನೀರುಕೊಲ್ಲಿ ಗ್ರಾಮ, ಮಡಿಕೇರಿ ತಾ॥. 4. ಶಾರೂಖ್, 28 ವರ್ಷ, ನೀರುಕೊಲ್ಲಿ ಗ್ರಾಮ, ಮಡಿಕೇರಿ ತಾ|| (MDMA ಮಾರಾಟ) 5. ನಿಯಾಸ್, 39 ವರ್ಷ, ಇಬ್ನಿವಳವಾಡಿ ಗ್ರಾಮ, ಮಡಿಕೇರಿ

 ವಶಪಡಿಸಿಕೊಂಡ ಸ್ವತ್ತುಗಳ ವಿವರ; 1. 245 ಗ್ರಾಂ ಗಾಂಜಾ 2. 28.50 730 MDMA 3. ಕೃತ್ಯಕ್ಕೆ ಬಳಸಿದ ಒಂದು ಆಟೋ ಮತ್ತು ಒಂದು ಕಾರು.

ತನಿಖಾ ತಂಡದ ವಿವರ; 1. ಶ್ರೀ ಸೂರಜ್.ಪಿ.ಎ. ಡಿಎಸ್ಪಿ, ಮಡಿಕೇರಿ ಉಪವಿಭಾಗ. 2. ಶ್ರೀ ಚಂದ್ರಶೇಖರ್.ಹೆಚ್.ವಿ. ಪಿಐ, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ. 3. ಶ್ರೀ ಸುಬ್ರಮಣ್ಯ, ಪ್ರೋ.ಪಿಎಎಸ್‌ಐ, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ. 4. ಶ್ರೀ ವಸಂತ, ಎಎಸ್‌ಐ, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ. 5. ಶ್ರೀ ಚರ್ಮಣ್ಣ, ಎಎಸ್‌ಐ, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ. 6. ಶ್ರೀ ಪ್ರೇಮ್ ಕುಮಾರ್, ಹೆಚ್ಸಿ, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ. 7. ಶ್ರೀ ಲೋಕೇಶ್, ಹೆಚ್ಸಿ, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ. 8. ಶ್ರೀ ಮಹೇಶ್.ಎಂ.ಕೆ, ಹೆಚ್ಸಿ, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ. 9. ಶ್ರೀ ಮಧುಸೂದನ್, ಹೆಚ್ಸಿ, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ. 10. ಶ್ರೀ ಪ್ರಸನ್ನ ಕುಮಾರ್, ಹೆಚ್ಸಿ, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ. 11. ಶ್ರೀ ಉದಯ ಕುಮಾರ್.ಜಿ.ಆರ್, ಹೆಚ್ಸಿ, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ. 12. ಶ್ರೀ ಹರೀಶ್.ಎಲ್, ಪಿಸಿ, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ. 13. ಶ್ರೀ ಮಂಜುನಾಥ.ಸಿ, ಪಿಸಿ, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ. 14. ಶ್ರೀ ರಾಜೇಂದ್ರ,ಕೆ.ಸಿ, ಪಿಸಿ. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ. 15. ಶ್ರೀ ಸಂತೋಷ್, ಪಿಸಿ. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ. 16. ಶ್ರೀ ಈರಪ್ಪ ವಠಾರ, ಪಿಸಿ, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ. 17. ಶ್ರೀ ಮಂಜುನಾಥ.ಬಿ.ಡಿ, ಪಿಸಿ, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ.

ಸದರಿ ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿರವರುಗಳನ್ನು ಕು|| ಬಿಂದು ಮಣಿ.ಆರ್.ಎನ್, ಐಪಿಎಸ್, ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ ರವರು ಶ್ಲಾಘಿಸಿರುತ್ತಾರೆ.

What's Your Reaction?

Like Like 3
Dislike Dislike 0
Love Love 1
Funny Funny 1
Angry Angry 0
Sad Sad 0
Wow Wow 1