Kodagu

ಮಡಿಕೇರಿ; ಏಪ್ರಿಲ್ 18 ಮತ್ತು 19ರಂದು ಗೌಡ ಜನಾಂಗ ಬಾಂಧವರಿಗಾಗಿ ವಿವಿಧ ವಿಭಾಗಗಳಲ್ಲಿ ಫುಟ್ಬಾಲ್ ಪಂದ್ಯಾವಳಿ

admincoorgdaily

ಮಡಿಕೇರಿ; ಏಪ್ರಿಲ್ 18 ಮತ್ತು 19ರಂದು ಗೌಡ ಜನಾಂಗ ಬಾಂಧವರಿಗಾಗಿ ವಿವಿಧ ವಿಭಾಗಗಳಲ್ಲಿ ಫುಟ್ಬಾಲ್ ಪಂದ್ಯಾವಳಿ

ಮಡಿಕೇರಿ: ಮಡಿಕೇರಿ ಅರೆಭಾಷೆ ಗೌಡ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ ನಗರದ ಗಾಂಧಿ ಮೈದಾನದಲ್ಲಿ ಗೌಡಜನಾಂಗ ಬಾಂಧವರಿಗಾಗಿ ವಿವಿಧ ವಿಭಾಗಗಳಲ್ಲಿ ಫುಟ್ಬಾಲ್ ಪಂದ್ಯಾಟವನ್ನು ಏ.೧೮,೧೯ರಂದು ಆಯೋಜಿಸಲಾಗಿದೆ ಎಂದು ಮಡಿಕೇರಿ ಅರೆಭಾಷೆ ಗೌಡ ಸ್ಪೋರ್ಟ್ಸ್ ಅಕಾಡೆಮಿ ಪ್ರಮುಖರಾದ ಶ್ರೀನಿವಾಸ್ ತಿಳಿಸಿದರು.

ಏ.೧೮ರಂದು ಬೆಳಗ್ಗೆ ೯.೩೦ ಗಂಟೆಗೆ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಗುತ್ತದೆ. ವಿವಿಧ ವಿಭಾಗದಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ೨೯ ತಂಡಗಳು ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿದ್ದಾರೆ. ಪಂದ್ಯಾವಳಿಯು ಗೌಡ ಫುಟ್ಬಾಲ್ ಚಾಂಪಿಯನ್ ಲೀಗ್, ಲೆಜೆಂಡ್ಸ್ ಫುಟ್ಬಾಲ್ ಚಾಂಪಿಯನ್ ಟ್ರೋಫಿ, ಅಂಡರ್ ೧೬ ಬಾಲಕರ ಚಾಂಪಿಯನ್ ಟ್ರೋಫಿ, ಗೌಡ ಬಾಲಕಿಯರಿಗಾಗಿ ಗೌಡ ಒಪನ್ ಫುಟ್ಬಾಲ್ ಚಾಂಪಿಯನ್ ಟ್ರೋಫಿ, ಹಾಗೂ ನಾಕೌಟ್ ಮಾದರಿಯಲ್ಲಿ ಗ್ರಾಮಾಂತರ ಮಟ್ಟದ ಹಗ್ಗಜಗ್ಗಾಟ ನಡೆಯಲಿದೆ ಎಂದು ತಿಳಿಸಿದ್ದಾರೆ.

ಹಗಲು ಮತ್ತು ರಾತ್ರಿ ವೇಳೆ ನಡೆಯುವ ಪಂದ್ಯಾವಳಿ ಆಗಿರುವುದರಿಂದ ಆಟಗಾರರು ಮತ್ತು ಪ್ರೇಕ್ಷಕರಿಗೆ ರೋಚಕ ಮನರಂಜನೆ ನೀಡಲಿದೆ. ಎರಡು ದಿನಗಳ ಕಾಲ ಹಗಲು-ರಾತ್ರಿ ಗಾಂಧಿ ಮೈದಾನದಲ್ಲಿ ಗೌಡ ಸಮುದಾಯದ ಕ್ರೀಡಾ ಹಬ್ಬ ಮೆರುಗು ತರಲಿದೆ ಎಂದು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಮನೋಜ್, ನಯನ್, ಕುಡೆಕಲ್ಲು ಸಂತೋಷ್ ಇದ್ದರು.