Kodagu

ಮಡಿಕೇರಿ: ಗಾಳಿಬೀಡು-ಕಡಮಕಲ್ಲು ರಸ್ತೆ ಅಭಿವೃದ್ಧಿ ಕಾಮಗಾರಿಗೆ 3.50 ಕೋಟಿ ಅನುದಾನ: ನ.14ರಂದು ರಸ್ತೆ ಕಾಮಗಾರಿಗೆ ಶಾಸಕ ಡಾ.ಮಂತರ್ ಗೌಡ ಚಾಲನೆ

admincoorgdaily

ಮಡಿಕೇರಿ: ಮಡಿಕೇರಿ, ಗಾಳಿಬೀಡು, ಕಡಮಕಲ್ಲು ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ೩.೫೦ ಕೋಟಿ ಅನುದಾನ ಲಭ್ಯವಾಗಿದೆ ಎಂದು ಗಾಳಿಬೀಡು ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ.ಡಿ.ಸುಭಾಷ್ ಅಳ್ವ ತಿಳಿಸಿದರು.

ಕಳೆದ ೨೫ ವರ್ಷಗಳಿಂದ ಮಡಿಕೇರಿ, ಗಾಳಿಬೀಡು, ಕಡಮಕಲ್ಲು ರಸ್ತೆ ಅಭಿವೃದ್ಧಿ ಕಾಣದೆ ನನೆಗುದಿಗೆ ಬಿದ್ದಿತ್ತು. ಮಡಿಕೇರಿ ವಿಧಾನ ಸಭಾ ಕ್ಷೇತ್ರ ಶಾಸಕ ಡಾ.ಮಂತರ್‌ಗೌಡ ಅವರ ವಿಶೇಷ ಪ್ರಯತ್ನದಿಂದ ಇಂದು ೩.೫೦ ಕೋಟಿ ಅನುಧಾಮ ಲಭ್ಯವಾಗಿದೆ. ಈ ಹಿಂದೆ ಶಾಸಕರು ನೀಡಿದ್ದ ಭರವಸೆ ಈಡೇರಿಸಿದ್ದಾರೆ. ರಸ್ತೆ ಕಾಮಗಾರಿಗೆ ನ.೧೪ರಂದು ಗಾಳೀಬೀಡು ಗ್ರಾಮದ ಕೋಳಿಗೂಡು ಪ್ರದೇಶದಲ್ಲಿ ಶಾಸಕ ಡಾ.ಮಂತರ್‌ಗೌಡ ಅವರು ಬೆಳಗ್ಗೆ ೯.೩೦ ಗಂಟೆಗೆ ಭೂಮಿಪೂಜೆ ನೆವವೇರಿಸಲಿದ್ದಾರೆ ಎಂದು ತಿಳಿಸಿದರು.

 ಸುದ್ದಿಗೋಷ್ಠಿಯಲ್ಲಿ ವಲಯ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೋಳುಮುಡಿಯನ ಅನಂತಕುಮಾರ್, ಪ್ರಮುಖರಾದ ಪುಷ್ಪ ಪೂಣಚ್ಚ, ಹರಿಪ್ರಸಾದ್ ಕೋಚನ, ಮದನ್ ಕೊಂಬಾರನ, ಗಣಪತಿ ಇದ್ದರು.