ಮಡಿಕೇರಿ: ರಸ್ತೆ ಬದಿ ಕಸ ಎಸೆದ ಹೋಂಸ್ಟೇಗೆ 12 ಸಾವಿರ ರೂ. ದಂಡ
admincoorgdaily

ಮಡಿಕೇರಿ, ಆ.29: ನಗರದ ಕನ್ನಂಡ ಬಾಣೆ ಪ್ರದೇಶದಲ್ಲಿರುವ ಹೋಂಸ್ಟೇಯೊಂದು ಒಣ ಕಸ ಹಾಗೂ ಹಸಿ ಕಸವನ್ನು ರಸ್ತೆ ಬದಿಯಲ್ಲಿ ಎಸೆದ ಹಿನ್ನೆಲೆಯಲ್ಲಿ ಮಡಿಕೇರಿ ನಗರಸಭೆ ಅಧಿಕಾರಿಗಳು ಹಾಗೂ ಕೊಡಗು ಹಿತರಕ್ಷಣಾ ವೇದಿಕೆಯ ಪದಾಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಬಳಿಕ ಕಸ ಎಸೆದ ಹೋಂಸ್ಟೇಯವರಿಗೆ ರೂ. 12 ಸಾವಿರ ದಂಡ ವಿಧಿಸಲಾಯಿತು ಎಂದು ತಿಳಿದುಬಂದಿದೆ.