ಮಡಿಕೇರಿ;ಮನೆಗೆ ನುಗ್ಗಿ ಬೆಳ್ಳಿಯ ಸಾಮಗ್ರಿಗಳ ಕಳವು
admincoorgdaily

ಮಡಿಕೇರಿ, ಮೇ 4: ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಮನೆಗೆ ನುಗ್ಗಿದ ಕಳ್ಳರು ಮನೆಯಲ್ಲಿದ್ದ ಬೆಳ್ಳಿ ಸಾಮಗ್ರಿಗಳನ್ನು ಕಳವು ಮಾಡಿ ಪರಾರಿಯಾಗಿರುವ ಘಟನೆ ವಾರದ ಹಿಂದೆ ಮಡಿಕೇರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮಡಿಕೇರಿ-ಮಾದಾಪುರ ರಸ್ತೆಯ ಪಂಪಿನ ಕೆರೆ ಬಳಿ ಇರುವ ಕವಿತಾ ಕರುಂಬಯ್ಯ ಅವರು ವಾರದ ಹಿಂದೆ ಸಮಾರಂಭಕ್ಕೆಂದು ತೆರಳಿದ್ದ ಸಂದರ್ಭಮನೆಯ ಹಿಂಬಾಗಿಲನ್ನು ಮುರಿದು ಒಳನುಗ್ಗಿದ ಕಳ್ಳರು ಮನೆಯನ್ನೆಲ್ಲಾ ಜಾಲಾಡಿ ಮನೆಯಲ್ಲಿದ್ದ ಅಂದಾಜು ರೂ. 40 ಸಾವಿರ ಮೌಲ್ಯದ ಬೆಳ್ಳಿಯ ಸಾಮಗ್ರಿಗಳನ್ನು ಕದ್ದೊಯ್ದಿದ್ದಾರೆ.
ಕಳ್ಳರ ಜಾಡು ಪತ್ತೆಯಾಗದಂತೆ ಮಾಡುವ ಸಲುವಾಗಿ ಮನೆಯೊಳಗಡೆ ಮಲ, ಮೂತ್ರ ವಿಸರ್ಜನೆ ಮಾಡಿ ಪರಾರಿಯಾಗಿದ್ದಾರೆ. ಸಿಸಿ ಕ್ಯಾಮರದಲ್ಲಿ ಕಳ್ಳರ ಚಲನವಲನ ಪತ್ತೆಯಾಗಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಮಡಿಕೇರಿ ನಗರ ಪೊಲೀಸರು ಕಳ್ಳರ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.