ಮಡಿಕೇರಿ; ಕರ್ಕಶ ಶಬ್ದದೊಂದಿಗೆ ಸಾರ್ವಜನಿಕರಿಗೆ ಕಿರಿಕಿರಿ; ಜಿಪ್ಸಿ ವಾಹನವನ್ನು ವಶಕ್ಕೆ ಪಡೆದ ಪೊಲೀಸರು

Feb 3, 2026 - 10:59
Feb 3, 2026 - 11:02
 0  1.2k
ಮಡಿಕೇರಿ; ಕರ್ಕಶ ಶಬ್ದದೊಂದಿಗೆ ಸಾರ್ವಜನಿಕರಿಗೆ ಕಿರಿಕಿರಿ; ಜಿಪ್ಸಿ ವಾಹನವನ್ನು ವಶಕ್ಕೆ ಪಡೆದ ಪೊಲೀಸರು

ಮಡಿಕೇರಿ,ಫೆ2.ಅನಧಿಕೃತವಾಗಿ‌ ವಾಹನದ ಸ್ವರೂಪ ಬದಲಾಯಿಸಿಕೊಂಡು ಕರ್ಕಶ ಶಬ್ದದ ಸೈಲೆನ್ಸರ್ ಅಳವಡಿಸಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ ಹಿನ್ನೆಲೆ ಜಿಪ್ಸಿ ವಾಹನವೊಂದನ್ನು ಮಡಿಕೇರಿ ಸಂಚಾರಿ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.

KA01 NG2730 ಸಂಖ್ಯೆಯ ಜಿಪ್ಸಿ ವಾಹನವು ಮಡಿಕೇರಿ ನಗರದಲ್ಲಿ ಕರ್ಕಶ ಶಬ್ದ ಮಾಡಿಕೊಂಡು ರೇಸಿಂಗ್ ಸ್ಪೀಡ್‌ನಲ್ಲಿ ಅಪಾಯಕರ ರೀತಿಯಲ್ಲಿ ಸಂಚರಿಸುತ್ತಿರುವುದಾಗಿ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಇಂದು ಸೋಮವಾರ ಸಂಚಾರಿ ಠಾಣೆ ಪೊಲೀಸರು ಆ ಜಿಪ್ಸಿ ವಾಹನ ಎಫ್.ಎಂ.ಸಿ. ಕಾಲೇಜು ಕಡೆಯಿಂದ ನಗರದ ಕಡೆಗೆ ಬರುತ್ತಿದ್ದಾಗ ವಾಹನವನ್ನು ವಶಕ್ಕೆ ಪಡೆದುಕೊಂಡು ಕಲಂ: 281 BNS 2023, ರೆ\ವಿ. 52, 53(1), 192, 184, 189 ಐಎಂವಿ ಆಕ್ಟ್ ನಡಿ ಪ್ರಕರಣ ದಾಖಲಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

 ಯಾವುದೇ ವಾಹನಗಳ ಆರ್.ಸಿ. ನಿಯಮಗಳನ್ನು ಉಲ್ಲಂಘನೆ ಮಾಡಿ ಅನಧಿಕೃತವಾಗಿ ವಾಹನಗಳ ಮೂಲ ಸ್ವರೂಪವನ್ನು ಬದಲಾವಣೆ ಮಾಡುವುದು ಅಥವಾ ಕರ್ಕಶ ಶಬ್ದ ಉಂಟುಮಾಡುವ ಸೈಲೆನ್ಸರ್, ಹಾರ್ನ್‌ಗಳನ್ನು ಅಳವಡಿಸಿಕೊಳ್ಳುವುದು. ವೀಲಿಂಗ್ ಮಾಡಿಕೊಂಡು ಚಾಲನೆ ಮಾಡುವವರನ್ನು ಪತ್ತೆಹಚ್ಚಿ ಪ್ರಕರಣ ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಬೇಕೆಂದು ಪೊಲೀಸ್‌ ಅಧೀಕ್ಷಕರಾದ ಬಿಂದುಮಣಿ ಪತ್ರಿಕೆ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

What's Your Reaction?

Like Like 2
Dislike Dislike 0
Love Love 0
Funny Funny 1
Angry Angry 0
Sad Sad 1
Wow Wow 0