ಮಡಿಕೇರಿ: ಕಸಾಪ, ಲೇಖಕರ ಬಳಗದ ವತಿಯಿಂದ ಆ.14 ರಂದು ಎಸ್ ಜಾನಕಿ ಅವರ ಗೀತ ನಮನ ಕಾರ್ಯಕ್ರಮ
admincoorgdaily

ಮಡಿಕೇರಿ. ಆ.10: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ, ಕೊಡಗು ಪತ್ರಿಕಾ ಭವನ ಟ್ರಸ್ಟ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಆ.14 ರಂದು
ಮಡಿಕೇರಿಯ ಕೊಡಗು ಪತ್ರಿಕಾ ಭವನದ ಸಭಾಂಗಣದಲ್ಲಿ ದಿ. ಎಸ್ ಜಾನಕಿ ಅಮ್ಮ ಅವರಿಗೆ ಪುಷ್ಪ ನಮನ, ನುಡಿ ನಮನ, ಗಾನ ನಮನ ನಡೆಯಲಿದೆ.
ಜಿಲ್ಲೆಯ ಗಾಯಕರಿಂದ ದಿ.ಎಸ್ ಜಾನಕಿ ಅವರ ಗೀತೆಗಳನ್ನು ಹಾಡುವ ಮೂಲಕ ಗಾನ ನಮನ ಕಾರ್ಯಕ್ರಮವನ್ನು ಮಡಿಕೇರಿಯ ಕೊಡಗು ಪತ್ರಿಕಾ ಭವನದ ಸಭಾಂಗಣದಲ್ಲಿ ಆ.14 ರಂದು ಶುಕ್ರವಾರ ಬೆಳಿಗ್ಗೆ 10.30 ಕ್ಕೆ ಏರ್ಪಡಿಸಲಾಗಿದೆ.
ಕಾರ್ಯಕಮದ ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರು ಹಾಗೂ ಕೊಡಗು ಪತ್ರಿಕಾ ಭವನ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಎಂ.ಪಿ. ಕೇಶವ ಕಾಮತ್ ವಹಿಸಲಿದ್ದು, ಕಾರ್ಯಕಮದ ಉದ್ಘಾಟನೆಯನ್ನು ಗಾಯಕರು, ಶಕ್ತಿ ದಿನಪತ್ರಿಕೆಯ ಸಂಪಾದಕರು ಹಾಗೂ ಕೊಡಗು ಪತ್ರಿಕಾ ಭವನ ಟ್ರಸ್ಟ್ನ ಟ್ರಸ್ಟಿ ಜಿ. ಚಿದ್ವಿಲಾಸ್ ನೆರವೇರಿಸಲಿದ್ದಾರೆ. ಕಾರ್ಯಕಮದಲ್ಲಿ ಕೊಡಗು ಪತ್ರಕರ್ತರ ಸಂಘ ಅಧ್ಯಕ್ಷರು ಹಾಗೂ ಕೊಡಗು ಪತ್ರಿಕಾ ಭವನ ಟ್ರಸ್ಟ್ನ ಟ್ರಸ್ಟಿ ಹೆಚ್.ಟಿ. ಅನಿಲ್ ನುಡಿ ನಮನ ಸಲ್ಲಿಸಲಿದ್ದಾರೆ. ಕಾರ್ಯಕಮದ ಕುರಿತು ಪ್ರಾಸ್ತಾವಿಕವಾಗಿ ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷರಾದ ಟಿ.ಜಿ. ಪ್ರೇಮ್ ಕುಮಾರ್ ಮಾತನಾಡಲಿದ್ದಾರೆ.
ಜಿಲ್ಲೆಯ ಹಲವಾರು ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಈ ಕಾರ್ಯಕ್ರಮ ಏರ್ಪಡಿಸಲಾಗಿದ್ದು ಸಹಮತ ವೇದಿಕೆ, ಕೊಡಗು ಜಿಲ್ಲೆ, ಕೊಡಗು ಪತ್ರಕರ್ತರ ಸಂಘ, ಮಡಿಕೇರಿಯ ಲಯನ್ಸ್ ಸಂಸ್ಥೆ, ಕೊಡಗು ಜಿಲ್ಲಾ ಮಹಿಳಾ ಬರಹಗಾರ ಸಂಘ, ಕೊಡಗು ಜಾನಪದ ಪರಿಷತ್ತು, ಸಮರ್ಥ ಕನ್ನಡಿಗರು, ಕೊಡಗು ಜಿಲ್ಲಾ ಅಹಿಂದ ಒಕ್ಕೂಟ, ರೋಟರಿ ವುಡ್ಸ್ ಮಡಿಕೇರಿ, ಗೌಡ ಮಹಿಳಾ ಒಕ್ಕೂಟ. ಚೇರಂಬಾಣೆ, ಕರ್ನಾಟಕ ದಲಿತ ಸಂಘರ್ಷ ಸಮಿತಿ, ಕೊಡಗು, ಕ್ರೈಸ್ತ ಸಹಕಾರ ಸಂಘ ಮಡಿಕೇರಿ, ಕೊಡಗು ಜಿಲ್ಲಾ ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆ, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಕೊಡಗು ಗೌಡ ವಿದ್ಯಾ ಸಂಸ್ಥೆ, ಕೊಡಗು ಜಿಲ್ಲಾ ಮಹಿಳಾ ಸಹಕಾರ ಬ್ಯಾಂಕ್ ಮಡಿಕೇರಿ, ಮತ್ತು ಚೌಡೇಶ್ವರಿ ದೇವಾಂಗ ಮಹಿಳಾ ಸಮಾಜದ ಸಹಯೋಗದೊಂದಿಗೆ ಪುಷ್ಪ ನಮನ, ನುಡಿ ನಮನ ಮತು ಗಾನ ನಮನ ಕಾರ್ಯಕ್ರಮ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಶ್ರೀಮತಿ ರೇವತಿ ರಮೇಶ್ ಮತ್ತು ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಗೌರವ ಕಾರ್ಯದರ್ಶಿ ಶ್ರೀಮತಿ ಭಾರತಿ ರಮೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.