Kodagu

ಮಡಿಕೇರಿ: ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ,ಅಪರಾಧಿಗೆ ಶಿಕ್ಷೆ

admincoorgdaily

ಮಡಿಕೇರಿ: ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ,ಅಪರಾಧಿಗೆ ಶಿಕ್ಷೆ

ಮಡಿಕೇರಿ: ಗ್ರಾಮಾಂತರ ಠಾಣಾ ಸರಹದ್ದಿಗೆ ಸೇರಿದ ಕಡಗದಾಳು ಗ್ರಾಮದ ಕಾಫಿ ಎಸ್ಟೇಟ್ ಲೈನ್ ಮನೆಯಲ್ಲಿ ವಾಸವಿದ್ದ ನೊಂದ ಬಾಲಕಿಯರಿಬ್ಬರ ತಾಯಿಯು ದಿನಾಂಕ 16.03.2020 ರಂದು ಸ್ವಂತ ಕೆಲಸದ ನಿಮಿತ್ತ ತನ್ನ ಊರಾದ ರಾಯಚೂರು ಜಿಲ್ಲೆಯ ಸಿಂಧನೂರಿಗೆ ಹೋಗಬೇಕಾದ ಅವಶ್ಯಕತೆ ಇದ್ದುದರಿಂದ ತನ್ನ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳನ್ನು ತನ್ನ ಪರಿಚಯಸ್ಥನಾದ ಬಂಗಾಳ ಮೂಲದ ಆರೋಪಿ ಆನಂದಿ ಮಂಡಲ್‌ ಜವಾಬ್ದಾರಿಯಲ್ಲಿ ಬಿಟ್ಟು ಹೋಗಿದ್ದು, ತದನಂತರ ಕೋವಿಡ್-19 ಲಾಕ್ ಡೌನ್ ಶುರು ಆಗಿದ್ದರಿಂದ ಹಿಂದಿರುಗಲು ಅಸಾಧ್ಯವಾಗಿದ್ದು ಆ ಸಂದರ್ಭದಲ್ಲಿ ಆತ ಅಪ್ರಾಪ್ತ ಬಾಲಕಿಯರನ್ನು ನೋಡಿಕೊಳ್ಳುತ್ತಿದ್ದು ಆರೋಪಿ ಬಾಲಕಿಯರಿಬ್ಬರ ಮೇಲೆ ಹಲವಾರು ಬಾರಿ ಲೈಂಗಿಕ ಹಲ್ಲೆ, ಮಾನ ಭಂಗ ಮಾಡಿದ್ದಾನೆಂದು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ,

ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯ ಉಪನಿರೀಕ್ಷಕರಾಗಿದ್ದ ಚಂದ್ರಶೇಖರ್ ಹೆಚ್.ವಿ ತನಿಖೆಯನ್ನು ಪೂರೈಸಿ ಇವರು ಘನ ನ್ಯಾಯಾಲಯಕ್ಕೆ ದೋಷರೋಪಣ ಪತ್ರ ಸಲ್ಲಿಸಿದ್ದು ಪ್ರಕರಣದ ವಿಚಾರಣೆ ನಡೆಸಿದ ಕೊಡಗು ಜಿಲ್ಲಾ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಡಿಕೇರಿಯ ನ್ಯಾಯಾಧೀಶರಾದ ಗೌರವಾನ್ವಿತ ಸಿ.ಕೆ. ಬಸವರಾಜು ಇವರು,

 ಆರೋಪಿಯ ಅಪರಾಧ ಸಾಬೀತಾದುದ್ದರಿಂದ ಆರೋಪಿಗೆ ಐಪಿಸಿ ಮತ್ತು ಪೋಕೋ ಕಾಯಿದೆಯ ಅಪರಾಧಗಳಿಗೆ ಒಟ್ಟು 5 ವರ್ಷದ ಸಜೆ ಮತ್ತು ರೂ.16,000/- ದಂಡವನ್ನು ವಿಧಿಸಿರುತ್ತಾರೆ. ನೊಂದ ಬಾಲಕಿಯರಿಬ್ಬರಿಗೆ ತಲಾ ರೂ.1,00,000/- ರೂಪಾಯಿ ಪರಿಹಾರ ಸರ್ಕಾರದಿಂದ ನೀಡುವಂತೆ ಆದೇಶಿಸಿರುತ್ತಾರೆ.ಅಭಿಯೋಗದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಬಿ.ಎಸ್ ರುದ್ರಪ್ರಸನ್ನ ಇವರು ವಾದ ಮಂಡಿಸಿರುತ್ತಾರೆ.