ಮಡಿಕೇರಿ ತಾಲ್ಲೂಕು ಪಿಯು ಕಾಲೇಜು ಮಟ್ಟದ ಫುಟ್ಬಾಲ್ ಪಂದ್ಯಾವಳಿ: ರಾಫೆಲ್ಸ್ ಇಂಟರ್ನ್ಯಾಷನಲ್ ಪಿಯು ಕಾಲೇಜು ಚಾಂಪಿಯನ್
admincoorgdaily

ಮಡಿಕೇರಿ:ಮದೆ ಮಹೇಶ್ವರ ಪಿಯು ಕಾಲೇಜು ಇವರ ಆಶ್ರಯದಲ್ಲಿ ಮೂರ್ನಾಡುವಿನ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ 2026-27ನೇ ಸಾಲಿನ ಮಡಿಕೇರಿ ತಾಲ್ಲೂಕು ಪದವಿ ಪೂರ್ವ ಕಾಲೇಜು ಮಟ್ಟದ ಫುಟ್ಬಾಲ್ ಪಂದ್ಯಾವಳಿಯಲ್ಲಿ ಹೊದವಾಡದ ರಾಫೆಲ್ಸ್ ಇಂಟರ್ನ್ಯಾಷನಲ್ ಪಿಯು ಕಾಲೇಜು ಬಾಲಕರ ತಂಡ ಚಾಂಪಿಯನ್ ಪ್ರಶಸ್ತಿ ಅಲಂಕರಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಫೈನಲ್ ಪಂದ್ಯವು ರಾಫೆಲ್ಸ್ ಇಂಟರ್ನ್ಯಾಷನಲ್ ಕಾಲೇಜು ಹಾಗೂ ಮಡಿಕೇರಿ ಸಂತ ಮೈಕಲರ ತಂಡಗಳ ನಡುವೆ ನಡೆಯಿತು. ಎರಡು ತಂಡಗಳು ನಿಗದಿತ ಸಮಯದಲ್ಲಿ 1-1 ಗೋಲುಗಳ ಸಮಬಲ ಸಾಧಿಸಿತು. ಪೆನಾಲ್ಟಿ ಶೂಟೌಟ್ ನಲ್ಲಿ ಉತ್ತಮ ಗೋಲ್ ಕೀಪಿಂಗ್ ಹಾಗೂ ಯಶಸ್ವಿಯಾಗಿ ಪೆನಾಲ್ಟಿ ಶೂಟೌಟ್ ಬಾರಿಸಿದ ರಾಫೆಲ್ಸ್ ಕಾಲೇಜು ತಂಡವು 3-1 ಗೋಲುಗಳ ಅಂತರದಿಂದ ಗೆಲುವು ಸಾಧಿಸಿ ಚಾಂಪಿಯನ್ ಪ್ರಶಸ್ತಿ ಪಡೆಯಿತು.
ಇದಕ್ಕೂ ಮೊದಲು ರಾಫೆಲ್ಸ್ ಇಂಟರ್ನಾಷನಲ್ ಪಿಯು ಕಾಲೇಜು ತಂಡವು ಸೆಮಿಫೈನಲ್ ಪಂದ್ಯದಲ್ಲಿ 2-0 ಗೋಲುಗಳ ಅಂತರದಿಂದ ಮಡಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜು ತಂಡವನ್ನು ಮಣಿಸಿತು. ರಾಫೆಲ್ಸ್ ಕಾಲೇಜು ತಂಡವು ಕ್ವಾಟರ್ ಫೈನಲ್ ಪಂದ್ಯದಲ್ಲಿ 1-0 ಗೋಲುಗಳ ಅಂತರದಿಂದ ನಾಪೋಕ್ಲು ಸರ್ಕಾರಿ ಪದವಿ ಪೂರ್ವ ಕಾಲೇಜು ತಂಡವನ್ನು ಸೋಲಿಸಿತು. ಈ ಸಂದರ್ಭದಲ್ಲಿ ಕಾಲೇಜಿನ ತರಬೇತುದಾರ ಇಸ್ಮಾಯಿಲ್ ಕಂಡಕರೆ, ಉಪನ್ಯಾಸಕಿ ಪೂಜಶ್ರೀ ಇದ್ದರು.