ಮಡಿಕೇರಿ:MDMA ಮಾರಾಟಕ್ಕೆ ಯತ್ನ,ಮೂವರು ಅರೆಸ್ಟ್
ಮಡಿಕೇರಿ: ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಿಷೇಧಿತ ಮಾದಕ ವಸ್ತುಗಳ ಮಾರಾಟ /ಸರಬರಾಜು ಮಾಡುತ್ತಿದ್ದ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಕೊಡಗು ಜಿಲ್ಲಾ ಪೊಲೀಸ್ ಯಶಸ್ವಿಯಾಗಿದೆ.
ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಮಾರಾಟದ ಬಗ್ಗೆ ನಮ್ಮ ಕಛೇರಿ /ಠಾಣೆಗಳಿಗೆ ಸಾರ್ವಜನಿಕರಿಂದ ದೂರು ಬರುತ್ತಿದ್ದು, ನಿಷೇಧಿತ ಮಾದಕ ವಸ್ತುಗಳ ಮಾರಾಟ/ಸರಬರಾಜು/ ಬಳಕೆಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಮಡಿಕೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸಂಪಿಗೆ ಕಟ್ಟೆ ರಸ್ತೆ ಸಮೀಪ ನಿಷೇಧಿತ ಮಾದಕ ವಸ್ತು ಗಾಂಜಾ ಮಾರಾಟ/ಸೇವನೆ ಕುರಿತು ಖಚಿತ ಮಾಹಿತಿ ಹಿನ್ನೆಲೆಯಲ್ಲಿ ದಿನಾಂಕ: 26-07-2026 ರಂದು ದಾಳಿ ನಡೆಸಿ 03 ಜನ ಆರೋಪಿಗಳನ್ನು ನಿಷೇಧಿತ ಮಾದಕ ವಸ್ತುವಿನೊಂದಿಗೆ ದಸ್ತಗಿರಿ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗಿರುತ್ತದೆ. ಸದರಿ ಆರೋಪಿಗಳ ವಿರುದ್ಧ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಮೊ.ಸಂ: 66/2026, ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿ ಘನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ. ಕಲಂ: 22 NDPS Act
ಆರೋಪಿಗಳ ವಿವರ; ಮುತ್ತುರಾಜು.ಕೆ.ಆರ್. 24 ವರ್ಷ, ಕುಂದನಹಳ್ಳಿ ಗ್ರಾಮ, ಪಿರಿಯಾಪಟ್ಟಣ ತಾ॥, ಪ್ರಶಾಂತ್.ಕೆ.ಎಸ್, 34 ವರ್ಷ, ಚಿಟ್ಟೆನಹಳ್ಳಿ ಗ್ರಾಮ, ಪಿರಿಯಾಪಟ್ಟಣ ತಾ॥,ಪೂಣಚ್ಚ, 39 ವರ್ಷ, ಚೆನ್ನಕೇಶವನಗರ, ಬೆಂಗಳೂರು. ವಶಪಡಿಸಿಕೊಂಡ ಸ್ವತ್ತುಗಳ ವಿವರ; 10.05 ಗ್ರಾಂ. MDMA ಕೃತ್ಯಕ್ಕೆ ಬಳಸಿದ ಒಂದು ಆಟೋ ಮತ್ತು ಒಂದು ಕಾರು
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
