ಮಡಿಕೇರಿ;ಗಾಂಜಾ ಮಾರಾಟ ಮತ್ತು ಸರಬರಾಜು ಮಾಡುತ್ತಿದ್ದ ಮೂವರ ಬಂಧನ
ಮಡಿಕೇರಿ; ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಿಷೇಧಿತ ಮಾದಕ ವಸ್ತುಗಳ ಮಾರಾಟ /ಸರಬರಾಜು ಮಾಡುತ್ತಿದ್ದ ವ್ಯಕ್ತಿಗಳನ್ನು ಪತ್ತೆ ಹಚ್ಚುವಲ್ಲಿ ಕೊಡಗು ಜಿಲ್ಲಾ ಪೊಲೀಸ್ ಯಶಸ್ವಿಯಾಗಿದೆ.
ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಮಾರಾಟದ ಬಗ್ಗೆ ನಮ್ಮ ಕಛೇರಿ ಠಾಣೆಗಳಿಗೆ ಸಾರ್ವಜನಿಕರಿಂದ ದೂರು ಬರುತ್ತಿದ್ದು, ನಿಷೇಧಿತ ಮಾದಕ ವಸ್ತುಗಳ ಮಾರಾಟ/ಸರಬರಾಜು/ಬಳಕೆಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಇನ್ನವಳವಾಡಿ ಗ್ರಾಮದ ಸಿಂಕೋನದಿಂದ ಮಕ್ಕಂದೂರು ಕಡಗೆ ಹೋಗುವ ರಸ್ತೆಯಲ್ಲಿ ನಿಷೇಧಿತ ಮಾದಕ ವಸ್ತು ಗಾಂಜಾ ಮಾರಾಟ/ಸರಬರಾಜು ಕುರಿತು ಖಚಿತ ಮಾಹಿತಿ ಹಿನ್ನೆಲೆಯಲ್ಲಿ ದಿ: 28-04-2026 ರಂದು ದಾಳಿ ನಡೆಸಿ ನಿಷೇಧಿತ ಮಾದಕ ವಸ್ತುವಿನೊಂದಿಗೆ ದಸ್ತಗಿರಿ ಮಾಡಿ ಮಡಿಕೇರಿ ಗ್ರಾಮಾಂತರ ಪೊ.ಕಾ ಮೊ.ಸಂ.:73/2026, 0:20 (b) (ii) (A) ಎನ್‌ಡಿಪಿಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ 03 ಜನ ಆರೋಪಿಗಳನ್ನು ಘನ ನ್ಯಾಯಾಲಯಕ್ಕೆ ಹಾಜರುಪಡಿಸಿ ಕಾನೂನು ಕ್ರಮ ಕೈಗೊಳ್ಳಲಾಗಿರುತ್ತದೆ.
ಆರೋಪಿಗಳ ವಿವರ: 1. ಹಾರ್ಬರ್, 21 ವರ್ಷ, ಶೋರಟು, ಬಂಟ್ವಾಳ ತಾ|| ದಕ್ಷಿಣ ಕನ್ನಡ ಜಿಲ್ಲೆ. 2. ಸುಲ್ತಾನ್ ಪ್ರಧಾನ್, 55 ವರ್ಷ, ಕಳಿಂಗ ಗ್ರಾಮ, ಕಂದನಮಾಲ್ ಜಿಲ್ಲೆ, ಒರಿಸ್ಸಾ ರಾಜ್ಯ, 3. ಸ್ವರ್ಣಲತಾ ನಾಯಕ್, 35 ವರ್ಷ, ಮದಿನಂಜು ಗ್ರಾಮ, ಕಂದಮಾಲ್ ಜಿಲ್ಲೆ, ಒರಿಸ್ಸಾ ರಾಜ್ಯ
ವಶಪಡಿಸಿಕೊಂಡ ಸ್ವತ್ತುಗಳ ವಿವರ; 15.ಕೆಜಿ 903 ಗ್ರಾಂ ಗಾಂಜಾ
03 ಮೊಬೈಲ್‌ಗಳು.