Kodagu

ಮಡಿಕೇರಿ;ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ

admincoorgdaily

ಮಡಿಕೇರಿ;ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ

ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಿಷೇಧಿತ ಮಾದಕ ವಸ್ತುಗಳ ಮಾರಾಟ ಸರಬರಾಜು ಮಾಡುತ್ತಿದ್ದ ವ್ಯಕ್ತಿಗಳನ್ನು ಪತ್ತೆ ಹಚ್ಚುವಲ್ಲಿ ಕೊಡಗು ಜಿಲ್ಲಾ ಪೊಲೀಸ್ ಯಶಸ್ವಿಯಾಗಿದೆ.

ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಮಾರಾಟದ ಬಗ್ಗೆ ನಮ್ಮ ಕಛೇರಿ /ಠಾಣೆಗಳಿಗೆ ಸಾರ್ವಜನಿಕರಿಂದ ದೂರು ಬರುತ್ತಿದ್ದು, ನಿಷೇಧಿತ ಮಾದಕ ವಸ್ತುಗಳ ಮಾರಾಟ/ಸರಬರಾಜು/ ಬಳಕೆಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಇನ್ನವಳವಾಡಿ ಗ್ರಾಮದಲ್ಲಿ ನಿಷೇಧಿತ ಮಾದಕ ವಸ್ತು ಗಾಂಜಾ ಮಾರಾಟ ಕುರಿತು ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಇಂದು ದಾಳಿ ನಡೆಸಿ 03 ಜನ ಆರೋಪಿಗಳನ್ನು ನಿಷೇಧಿತ ಮಾದಕ ವಸ್ತುವಿನೊಂದಿಗೆ ದಸ್ತಗಿರಿ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗಿರುತ್ತದೆ.

ಸದರಿ ಆರೋಪಿಗಳ ವಿರುದ್ಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೊ.ಸಂ: 66/2026, ಕಲಂ: 20(b)(ii)(A) NDPS Act ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿ ಘನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ. *ಆರೋಪಿಗಳ ವಿವರ* 1. ಅಭಿಲಾಷ್ @ ಅಭಿ.ಕೆ.ಜೆ, 29 ವರ್ಷ, ಉಡತ್ ಮೊಟ್ಟೆ, ಎರವನಾಡು ಗ್ರಾಮ, ಮಡಿಕೇರಿ ತಾ॥ 2. ಆಕಾಶ್.ಪಿ.ವಿ. 20 ವರ್ಷ, ಮಕ್ಕಂದೂರು, ಮಡಿಕೇರಿ ತಾಳಿ, 3. ಮಿಲನ್.ಎ.ಸಿ. 21 ವರ್ಷ, ಹಾಲೇರಿ, ಸೋಮವಾರಪೇಟೆ ತಾ।। *ವರಪಡಿಸಿಕೊಂಡ ಸ್ವತ್ತುಗಳ ವಿವರ* 1. 2 ಕೆ. ಜಿ 136 ಗ್ರಾಂ ಗಾಂಜಾ 2. ಕೃತ್ಯಕ್ಕೆ ಬಳಸಿದ ಒಂದು ಪಿಕ್ ಜೀಪ್ 3. ನಗದು 1,310/-.