Kodagu

ಮಡಿಕೇರಿ-ವಿರಾಜಪೇಟೆ ರಸ್ತೆ ಕಾಮಗಾರಿ ಅಕ್ಟೋಬರ್ ನಲ್ಲಿ ಆರಂಭ:14 ಕೋಟಿ ರೂಗಳ ವೆಚ್ಚದಲ್ಲಿ ನಡೆಯಲಿರುವ ಕಾಮಗಾರಿ

admincoorgdaily

ಮಡಿಕೇರಿ-ವಿರಾಜಪೇಟೆ ರಸ್ತೆ ಕಾಮಗಾರಿ ಅಕ್ಟೋಬರ್ ನಲ್ಲಿ ಆರಂಭ:14 ಕೋಟಿ ರೂಗಳ ವೆಚ್ಚದಲ್ಲಿ ನಡೆಯಲಿರುವ ಕಾಮಗಾರಿ

ಮಡಿಕೇರಿ:ಕೊಡಗು ಜಿಲ್ಲೆಯ ಅತ್ಯಂತ ಪ್ರಮುಖ ರಸ್ತೆಯಾಗಿರುವ ಮಡಿಕೇರಿ- ವಿರಾಜಪೇಟೆ ರಸ್ತೆ(ರಾಜ್ಯ ಹೆದ್ದಾರಿ-27) ಯ ಅಭಿವೃದ್ಧಿ ಕಾರ್ಯ 2026 ರ ಅಕ್ಟೋಬರ್ ನಿಂದ ಆರಂಭಗೊಳ್ಳಲಿದೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 14 ಕೋಟಿ ರೂ ವೆಚ್ಚದಲ್ಲಿ ನಡೆಯಲಿರುವ ಈ ಕಾಮಗಾರಿಯ ಗುತ್ತಿಗೆಯನ್ನು ನಾಲ್ಕು ಹಂತದ ಟೆಂಡರ್ ಕರೆಯಲಾಗಿದ್ದು ಪ್ರಥಮ ದರ್ಜೆ ಗುತ್ತಿಗೆದಾರರಾದ ವಿ.ಟಿ.ದಿನೇಶ್ ಕುಮಾರ್,ವೆಂಕಟ ರಾಮಿ ರೆಡ್ಡಿ,ಹಾಗೂ ನೀತ್ ಅಯ್ಯಪ್ಪ ನವರು ಗುತ್ತಿಗೆ ಪಡೆದಿದ್ದು ಎಲ್ಲಾ ಆಡಳಿತಾತ್ಮಕ ಹಾಗೂ ತಾಂತ್ರಿಕ ಪ್ರಕೃಯೆಗಳು ಮುಗಿದಿರುತ್ತದೆ. ದಶಕಗಳ ಕಾಲದಿಂದಲೂ ಈ ರಸ್ತೆ ಸುಸಜ್ಜಿತ ರಸ್ತೆಯಾಗಬೇಕು ಎಂಬ ಬೇಡಿಕೆ ಜಿಲ್ಲೆಯ ಜನತೆಯ ಮುಂದಿದ್ದು ಮಾನ್ಯ ಶಾಸಕರಾದ ಎ.ಎಸ್.ಪೊನ್ನಣ್ಣ ಹಾಗೂ ಡಾ ಮಂತರ್ ಗೌಡ ರವರ ಪ್ರಯತ್ನದಿಂದ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿಯಲ್ಲಿ ಅನುದಾನ ಬಂದಿದ್ದು ಇನ್ನೊಂದು ಎರಡು ಮೂರು ತಿಂಗಳುಗಳ ಕಾಲ ಜನತೆ ಸಹಕರಿಸುವಂತೆ ತೆನ್ನಿರ ಮೈನಾ ಮನವಿ ಮಾಡಿದ್ದಾರೆ.

 ಕಾಮಗಾರಿ ನಡೆಯುವ ಅಧಿಕೃತ ಸೂಚನೆಯನ್ನು ಅರಿತು ಜನರ ದಿಕ್ಕು ತಪ್ಪಿಸುವ ನಿಟ್ಟಿನಲ್ಲಿ ಜಿಲ್ಲೆಯ ಕೆಲವು ರಾಜಕೀಯ ಅತೃಪ್ತ ನಾಯಕರು ಮಳೆಯ ಅಬ್ಬರವಿರುವಾಗ ಬೇತ್ರಿ ಸೇತುವೆ ಬಳಿ ಬಾಳೆ ಗಿಡ ನೆಟ್ಟು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ತಮ್ಮ ವಿಕೃತಿ ಪ್ರದರ್ಶನ ಮಾಡುತ್ತಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡುವುದಿಲ್ಲ. ಬದಲಿಗೆ ಅಭಿವೃದ್ಧಿ ಕಾರ್ಯ ಮಾಡುವ ಮೂಲಕ ಉತ್ತರ ನೀಡಲಿದ್ದೇವೆ ಎಂದು ತೆನ್ನಿರ ಮೈನಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.