48ನೇ ರಾಷ್ಟ್ರ ಮಟ್ಟದ ಬ್ರೈನೋಬ್ರೈನ್ ಸ್ಪರ್ಧೆಯಲ್ಲಿ ಮಡಿಕೇರಿ ಮಕ್ಕಳ ಅಮೋಘ ಸಾಧನೆ
admincoorgdaily

ಮಡಿಕೇರಿ ಸೆ.2 : “ಬ್ರೈನೋಬ್ರೈನ್” ಇಂಟರ್ ನ್ಯಾಷನಲ್ ಸಂಸ್ಥೆಯ ವತಿಯಿಂದ ಇತ್ತೀಚೆಗೆ ಚೆನ್ನೈನ ಚೆನ್ನೈ ಟ್ರೇಡ್ ಸೆಂಟರ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ “48ನೇ ರಾಷ್ಟ್ರ ಮಟ್ಟದ ಬ್ರೈನೋಬ್ರೈನ್ ಸ್ಪರ್ಧೆ-2026ರಲ್ಲಿ ಮಡಿಕೇರಿಯ “ಬ್ರೈನೋಬ್ರೈನ್” ಕೇಂದ್ರದ 34 ವಿದ್ಯಾರ್ಥಿಗಳು ಅಮೋಘ ಸಾಧನೆ ಮಾಡಿದ್ದಾರೆ.
ವಿದ್ಯಾರ್ಥಿಗಳು 21 ಚಾಂಪಿಯನ್ ಟ್ರೋಫಿ, 9 ಚಿನ್ನದ ಪದಕ ಮತ್ತು 4 ಬೆಳ್ಳಿಯ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ವಿದ್ಯಾರ್ಥಿಗಳ ಕಠಿಣ ಪರಿಶ್ರಮದ ಸಾಧನೆಯ ಹೆಗ್ಗಳಿಕೆಯು ತಮ್ಮ ತರಗತಿಯ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಸಲ್ಲಬೇಕು. ಕೇವಲ 3 ನಿಮಿಷದಲ್ಲಿ ವಿವಿಧ ರೀತಿಯ ಲೆಕ್ಕಗಳನ್ನು ಅತೀ ಚುರುಕಾಗಿ ಮಾಡುವ ಮೂಲಕ ಈ ಅದ್ಭುತ ಯಶಸ್ಸಿಗೆ ಕಾರಣಕರ್ತರಾದ ಮಕ್ಕಳಿಗೆ ಹಾಗೂ ಮುತುವರ್ಜಿ ವಹಿಸಿ ಚೆನ್ನೈಗೆ ಕರೆತಂದ ಪೋಷಕರಿಗೆ ತರಬೇತುದಾರರಾದ ಮಾಪಂಗಡ ಕವಿತಾ ಕರುಂಬಯ್ಯ ಅವರು ಅಭಿನಂದನೆ ಸಲ್ಲಿಸಿದರು.
“ಬ್ರೈನೋಬ್ರೈನ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶ್ರೀ ಆನಂದ್ ಸುಬ್ರಮಣ್ಯಂ, ತಾಂತ್ರಿಕ ನಿರ್ದೇಶಕ ಅರುಲ್ ಸುಬ್ರಮಣ್ಯಂ ಉಪಸ್ಥಿತರಿದ್ದು, ಮಡಿಕೇರಿ “ಬ್ರೈನೋಬ್ರೈನ್” ಕೇಂದ್ರದ ಮಕ್ಕಳ ಅತ್ಯುತ್ತಮ ಸಾಧನೆಯನ್ನು ಶ್ಲಾಘಿಸಿದರು.ಒಟ್ಟು 34 ಮಕ್ಕಳು ಮಾಪಂಗಡ ಕವಿತಾ ಕರುಂಬಯ್ಯ ಅವರ ನೇತೃತ್ವದಲ್ಲಿ ವಿವಿಧ ವಿಭಾಗಗಳಲ್ಲಿ ಭಾಗವಹಿಸಿದ್ದರು.
ಇದೇ ಸಂದರ್ಭ ಬ್ರೈನೋಬ್ರೈನ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶ್ರೀ ಆನಂದ್ ಸುಬ್ರಮಣ್ಯಂರವರಿಗೆ ಎಜುಕೇಷನ್ ಎಕ್ಷೆಲೆನ್ಸ್ ಅವಾರ್ಡ್ ಇನ್ ಚೈಲ್ಡ್ ಸ್ಕಿಲ್ ಡೆವಲಪ್ಮೆಂಟ್ ಮತ್ತು ತಾಂತ್ರಿಕ ನಿರ್ದೇಶಕ ಶ್ರೀ ಅರುಲ್ ಸುಬ್ರಮಣ್ಯಂ ರವರಿಗೆ ಔಟ್ ಸ್ಟ್ಯಾಂಡಿಂಗ್ ಕಾಂಟ್ರಿಬ್ಯುಷನ್ ಟು ಚೈಲ್ಡ್ ಡೆವಲಪ್ಮೆಂಟ್ ಅಂಡ್ ಎಜುಕೇಷನ್ ಅವಾರ್ಡ್ ಲಭಿಸಿತು.
ಸ್ಪರ್ಧೆಯಲ್ಲಿ ಭಾರತದ 400 ಬ್ರೈನೋಬ್ರೈನ್ ಸಂಸ್ಥೆಗಳಿಂದ ಒಟ್ಟು 8,500 ಮಕ್ಕಳು ಭಾಗವಹಿಸಿದ್ದು, ವಿವಿಧ ರೀತಿಯ ಲೆಕ್ಕಗಳನ್ನು ಅತೀ ಚುರುಕಾಗಿ ಮಾಡುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಚಾಂಪಿಯನ್ ಟ್ರೋಫಿ ವಿಜೇತರು:
ಆರುಷಿ.ಕೆ.ಸಿ, ಶ್ರೀಹಾನ್ ಸಂಜಯ್ ಜಿತ್ತಿ, ಅನ್ವಿತ್.ಎಸ್, ಲಲಿತ್ ಆದಿತ್ಯ ಬಿ, ಲಕ್ಷಿತ.ಬಿ.ಆರ್, ವಂಶಿ.ಕೆ.ಎಂ, ನಿಲ್ಹಾ ಜೆ ತಾರಕನ್, ಅಭಿನವ್ ಕೃಷ್ ಜಿ, ಆರಾಧ್ಯ.ಕೆ.ಸಿ, ಏಡನ್ ಜೆ.ತಾರಕನ್, ದೃಪದ್ ಪಿ ಮಣಿಕೋಥ್, ಲಿವ್ಯ ಸುನೀತ್‍ಕುಮಾರ್, ಮಯಾಂಕ್.ಎಂ, ಆಯಿಷ ಮಿನ್ಹ, ಫಾತಿಮ ಮಿಝ್ನ, ರುಷಾಂಕ್.ಸಿ.ಸಿ, ಗಣಿತ್ ಪೊನ್ನಣ್ಣ.ಎಂ.ಎಂ, ಮೊಹಮ್ಮದ್ ಶಯಾನ್, ಐಯಾರ.ಎಸ್, ಲಶಿಕ ರೈ ಜೆ, ಮೊಹಮ್ಮದ್ ಅಬಾನ್.ಸಿ,
ಚಿನ್ನದ ಪದಕ ವಿಜೇತರು: ದಿಯಾ.ವೈ.ಬಿ, ಜೆಶ್ವಿತ ತಂಗಮ್ಮ ಎ.ಪಿ, ರುಶಾಲಿ ಪಿ.ಜೆ, ಕನಿಷ ಸುನೀತ್‍ಕುಮಾರ್, ಕುಶನ್ ದೇವಪ್ಪ ವೈ.ಡಿ, ರಿಯಾಂಕ.ಎಂ, ನಿಧಿ ಆರ್ ಅನ್ವೇಕರ್, ಸಾಕ್ಷಾತ್ ಪಿ.ಗೌಡ, ಬಿ ಕೃಶ್ವಿನ್ ಆದ್ವಿಕ್,
ಬೆಳ್ಳಿ ಪದಕ ವಿಜೇತರು: ನಿಂಶಿ.ಕೆ.ಎಂ, ಪರೀಕ್ಷ.ಎ.ಎಲ್, ಜೊಹನ್ನಾ ಮಡ್ತಾ, ಪ್ರಣವ,