ಪೊಲೀಸ್ ವಾಹನದಂತೆ ಮಾರ್ಪಡಿಸಿದ ಮಹೀಂದ್ರಾ ಥಾರ್:ಪ್ರಕರಣ ದಾಖಲು

Aug 20, 2026 - 21:59
 0  329
ಪೊಲೀಸ್ ವಾಹನದಂತೆ ಮಾರ್ಪಡಿಸಿದ ಮಹೀಂದ್ರಾ ಥಾರ್:ಪ್ರಕರಣ ದಾಖಲು

ಕುಶಾಲನಗರ: ಖಾಸಗಿ ವಾಹನವನ್ನು ಪೊಲೀಸ್ ವಾಹನದ ಶೈಲಿಯಲ್ಲಿ ಮಾರ್ಪಡಿಸಿದ್ದ ಮಹೀಂದ್ರಾ ಥಾರ್ ವಾಹನದ ವಿರುದ್ಧ ಕೊಡಗು ಜಿಲ್ಲಾ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ನಿಯಮ ಉಲ್ಲಂಘಿಸಿ ಕಣ್ಣು ಕುಕ್ಕುವ ದೀಪ ಹಾಗೂ ಪೊಲೀಸ್ ವಾಹನಗಳ ಮಾದರಿಯ ಲೈಟ್‌ಗಳನ್ನು ಅಳವಡಿಸಿಕೊಂಡಿದ್ದ ಈ ವಾಹನವನ್ನು ಕುಶಾಲನಗರ ಟ್ರಾಫಿಕ್ ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಸಂಬಂಧ ಮೊ.ಸಂ 71/2026ರಂತೆ ಕಲಂ 281 BNS, ಮತ್ತು 52 R/W 192(a), 177 IMV ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0