ಮೇಕೇರಿ-ಅರವತ್ತೊಕ್ಲು ಸಂಪರ್ಕ ರಸ್ತೆಗೆ ಸ್ವಾತಂತ್ರ್ಯ ಹೋರಾಟಗಾರ ಪೂಜಾರಿರ ರಾಮ್ಮಪ್ಪ ಹೆಸರು ನಾಮಕರಣ

Dec 28, 2025 - 16:14
 0  84
ಮೇಕೇರಿ-ಅರವತ್ತೊಕ್ಲು ಸಂಪರ್ಕ ರಸ್ತೆಗೆ ಸ್ವಾತಂತ್ರ್ಯ ಹೋರಾಟಗಾರ ಪೂಜಾರಿರ ರಾಮ್ಮಪ್ಪ ಹೆಸರು ನಾಮಕರಣ

ಮಡಿಕೇರಿ:ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಡಿಕೇರಿ ತಾಲೂಕು ಮೇಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭೇಟಿ ನೀಡಿದರು. ಮೇಕೇರಿ-ಅರವತ್ತೊಕ್ಲು ಸಂಪರ್ಕ ರಸ್ತೆಗೆ ಸ್ವಾತಂತ್ರ್ಯ ಹೋರಾಟಗಾರ ಪೂಜಾರಿರ ರಾಮ್ಮಪ್ಪ ರಸ್ತೆ ಇಂದು ನಾಮಕರಣ ಮಾಡಬೇಕೆಂದು ಈ ಹಿಂದೆ ಸ್ಥಳೀಯರು ಶಾಸಕರಲ್ಲಿ ಮನವಿಯನ್ನು ಸಲ್ಲಿಸಿದ್ದರು.

 ಇದನ್ನು ಪರಿಗಣಿಸಿದ ಮಾನ್ಯ ಶಾಸಕರು, ಒಪ್ಪಿಗೆ ಸೂಚಿಸಿ, ಇಂದು ಮೆಕೇರಿ ಶಾಲಾ ಮೈದಾನದಲ್ಲಿ ಆಯೋಜನೆಗೊಂಡ ಕಾರ್ಯಕ್ರಮದಲ್ಲಿ ಈ ರಸ್ತೆಗೆ ಅಧಿಕೃತವಾಗಿ ಸ್ವಾತಂತ್ರ್ಯ ಹೋರಾಟಗಾರ ಪೂಜಾರಿರ ರಾಮಪ್ಪ ರಸ್ತೆ ಎಂದು ನಾಮಕರಣ ಮಾಡಿದರು.

 ಈ ಸಂದರ್ಭದಲ್ಲಿ ಪೂಜಾರಿರ ಕುಟುಂಬದ ಪಟ್ಟೆದಾರರು ಪೂಜಾರಿರ ಪೂವಯ್ಯ, ಅಂಬೆಕಲ್ ಕುಶಾಲಪ್ಪ, ಪಕ್ಷದ ಮುಖಂಡರು ಸೂರಜ್ ಹೊಸೂರು, ತೆನ್ನಿರ ಮೈನಾ, ಭೀಷ್ಮ ಮಾದಪ್ಪ, ಬಗರ್ ಹುಕುಂ ಸದಸ್ಯರು ಕೇಟೋಳಿ ಮೋಹನ್ ರಾಜ್, ಪಟ್ಟಡ ದೀಪಕ್, ಧ್ರುವ ಪೂಜಾರಿರ, ವಲಯ ಅಧ್ಯಕ್ಷರು ಪೊನ್ನಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷರು ರಕ್ಷಿತ್ ಉತ್ತಪ್ಪ, ಸದಸ್ಯರು ಹನೀಫ್, ದಿನೇಶ್, ಅಧಿಕಾರಿ ವರ್ಗದವರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0