ಮಾಲ್ದಾರೆ:ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ವಿತರಣೆ
ಸಿದ್ದಾಪುರ:-ಲಿಯೋರ ಗೋಲ್ ಅಂಡ್ ಡೈಮಂಡ್ಸ್ ಗೋಣಿಕೊಪ್ಪಲ ಇವರ ವತಿಯಿಂದ ಮಾಲ್ದಾರೆ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ವಿತರಿಸಲಾಯಿತು.
ಸಂಸ್ಥೆಯ ರೋಬಿನ್ ಪೀಟರ್ ಮಾತನಾಡಿ ಲಿಯೋರ ಸಂಸ್ಥೆಯು ಕಳೆದ ಎರಡು ವರ್ಷ ದಿಂದ ಹಲವು ಸೇವಾ ಯೋಜನೆಗಳನ್ನು ಹಮ್ಮಿಕೊಂಡಿದೆ.ಈ ವರ್ಷ ಗ್ರಾಮೀಣ ಭಾಗದ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ 500 ಗಳನ್ನು ಬ್ಯಾಗ್ ವಿತರಣೆ ಮಾಡಲಾಗಿದೆ ಹಾಗೂ ಮಕ್ಕಳೂ ಶಿಕ್ಷಣ ರಂಗದಲ್ಲಿ ಸಾಧನೆ ಮಾಡಬೇಕು ಎಂಬ ಉದ್ದೇಶದಿಂದ ಈ ಸೇವಾ ಚಟುವಟಿಕೆ ಮಾಡಲಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ರಾಜೇಶ್,ಪ್ರಾಥಮಿಕ ಶಾಲೆ ಯ ಮುಖ್ಯೋಪಾಧ್ಯಾಯರಾದ ವಿಜಯಕುಮಾರ್, ಮುಂತಾದವರು ಹಾಜರಿದ್ದರು.