ಮಾಲ್ದಾರೆ:ಪಲ್ಸ್ ಪೋಲಿಯೋ ಕಾರ್ಯಕ್ರಮ

Dec 21, 2025 - 11:46
 0  304
ಮಾಲ್ದಾರೆ:ಪಲ್ಸ್ ಪೋಲಿಯೋ ಕಾರ್ಯಕ್ರಮ

ಸಿದ್ದಾಪುರ: ಮಾಲ್ದಾರೆ ಅಂಗನವಾಡಿ ಕೇಂದ್ರದಲ್ಲಿ ಭಾನುವಾರ ರಂದು ಬೆಳಿಗ್ಗೆ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮ ಪಂ ಉಪಾಧ್ಯಕ್ಷ  ಕುಂಞಣ್ಣ ಗಿಡ ಕ್ಕೆ ನೀರು ಹಾಕುವ ಮೂಲಕ ಮತ್ತು ಮಗುವಿಗೆ ಎರಡು ಹನಿ ಪೋಲಿಯೋ ಹನಿಯನ್ನು ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಈ ಸಂದರ್ಭ ಪೋಷಕರು ಬಹಳ ಉತ್ಸಾಹದಿಂದ ಐದು ವರ್ಷದ ಒಳಗಿನ ಮಕ್ಕಳನ್ನು ಕರೆದುಕೊಂಡು ಬಂದು  ಪೋಲಿಯೋ ಹನಿಯನ್ನು ಹಾಕಿಸಿದರು.   ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆ ಚಂದ್ರವತಿ, ಆಶಾ ಕಾರ್ಯಕರ್ತೆ ವಾರಿಜ, ಮುಂತಾದವರು ಹಾಜರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0