ಮಾಲ್ದಾರೆ ಗ್ರಾ.ಪಂ ಗ್ರಾಮ ಸಭೆ

Dec 22, 2025 - 14:44
 0  290
ಮಾಲ್ದಾರೆ ಗ್ರಾ.ಪಂ ಗ್ರಾಮ ಸಭೆ

ಸಿದ್ದಾಪುರ:-ಮಾಲ್ದಾರೆ ಗ್ರಾಮ ಪಂಚಾಯಿತಿಯ 2025-26ನೇ ಸಾಲಿನ ಗ್ರಾಮಸಭೆ ಶನಿವಾರ ರಂದು ಗ್ರಾಪಂ ಅಧ್ಯಕ್ಷೆ ಮಾಲತಿ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮಾಲ್ದಾರೆ ಪಂಚಾಯತಿ ಕಟ್ಟಡದ ಮುಂಭಾಗದಲ್ಲಿ  ನೋಡಲ್ ಅಧಿಕಾರಿ ನವೀನ್ ಕುಮಾರ್ ಅವರ ಸಮ್ಮುಖದಲ್ಲಿ ನಡೆದ ಗ್ರಾಮ ಸಭೆಯಲ್ಲಿ ಗ್ರಾಮದಲ್ಲಿ ಬೆಳೆಗಾರು ಹಾಗೂ ಹೆಚ್ಚು ಕಾರ್ಮಿಕರು  ಇದ್ದು ಶನಿವಾರ ವಾಗಿರುವುದರಿದ ಬೆರಳೆಣಿಕೆಯಷ್ಟು ಜನರು ಮಾತ್ರ ಬಂದಿದ್ದರು ಹಾಗೂ ಕೆಲವು ಅಧಿಕಾರಿಗಳ ಗೈರಾಜರಾತಿ ಕೊಡ ಗ್ರಾಮ ಸಭೆಯಲ್ಲಿ ಕಾಣುತ್ತಿತ್ತು.

ಗ್ರಾಮ ಸಭೆಯಲ್ಲಿ ಗ್ರಾಮಿಣ ಬಾಗದ ರಸ್ತೆ, ಕುಡಿಯುವ ನೀರು, ಆಟದ ಮೈದಾನ, ಸ್ವಚ್ಚತೆ,  ಬಸ್ ಸಂಚಾರ, ಕಾಡುಪ್ರಾಣಿಗಳ ಹಾವಳಿ, ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ, ಮುಂತಾದವುಗಳ ಬಗ್ಗೆ  ಗ್ರಾಮಸ್ಥರು ಗಮನ ಸೆಳೆದರು. ಈ ಸಂದರ್ಭ ಆಹಾರ, ಪೊಲೀಸ್, ಅರಣ್ಯ,  ಪಶು, ಕೃಷಿ, ಶಿಕ್ಷಣ ,ಚೆಸ್ಕಾಂ, ಕಂದಾಯ, ಆರೋಗ್ಯ  ಇಲಾಖೆ ಸೇರಿದಂತೆ ಇತರೆ  ಅಧಿಕಾರಿಗಳು ಇಲಾಖೆಗಳಿಂದ ಸಿಗುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಮೋದ್ , ಉಪಾಧ್ಯಕ್ಷ  ಕುಂಞಣ್ಣ,ಸದಸ್ಯರುಗಳಾದ , ಸಮೀರ್,ನಿಯಾಜ್,ಚಂದ್ರ,ಸರಶ್ವತಿ,ಶೋಭ, ಇಸ್ಮಾಯಿಲ್, ಮೊಹಮ್ಮದ್ಅಲಿ, ಹನೀಫ,ಹಾಗೂಸಾರ್ವಜನಿಕರು ಆಶಾ ಕಾರ್ಯಕರ್ತರು ಹಾಗೂ ಅಂಗನವಾಡಿ ಕಾರ್ಯಕರ್ತರು  ಸೇರಿದಂತೆ ವಿವಿಧ  ಇಲಾಖೆ ಅಧಿಕಾರಿಗಳು ಹಾಜರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0