ಪಾಕಿಸ್ತಾನದ ಪರ ಬೇಹುಗಾರಿಕೆ ಮಾಡುತ್ತಿದ್ದ ವ್ಯಕ್ತಿಯ ಬಂಧನ

Sep 29, 2025 - 20:51
 0  387
ಪಾಕಿಸ್ತಾನದ ಪರ ಬೇಹುಗಾರಿಕೆ ಮಾಡುತ್ತಿದ್ದ ವ್ಯಕ್ತಿಯ ಬಂಧನ
Photo credit: INDIA TODAY

ಪಲ್ವಾಲ್: ಸೇನಾ ಚಟುವಟಿಕೆಗಳಿಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ಸೋರಿಕೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಹರಿಯಾಣದ ಮೇವಾತ್ ಜಿಲ್ಲೆಯ ವ್ಯಕ್ತಿಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಕೇಂದ್ರ ಗುಪ್ತಚರ ಸಂಸ್ಥೆಗಳ ಮಾಹಿತಿಯ ಮೇರೆಗೆ ಪಲ್ವಾಲ್ ಜಿಲ್ಲೆಯ ಅಪರಾಧ ತನಿಖಾ ವಿಭಾಗ (ಸಿಐಎ) ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ, ಹಾಥಿನ್ ಬ್ಲಾಕ್‌ನ ಅಲಿಮೇವ್ ಗ್ರಾಮದ ನಿವಾಸಿ ತೌಫಿಕ್ ನನ್ನು ಬಂಧಿಸಲಾಗಿದೆ.

 ತೌಫಿಕ್ ಸೇನಾ ಚಟುವಟಿಕೆಗಳ ವಿವರಗಳನ್ನು ಪಾಕಿಸ್ತಾನ ಹೈಕಮಿಷನ್ ಅಧಿಕಾರಿಗಳೊಂದಿಗೆ ಹಂಚಿಕೊಂಡಿದ್ದಾನೆ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ. ಆರೋಪಿಯ ಮೊಬೈಲ್ ಫೋನ್‌ನಿಂದ ಸೂಕ್ಷ್ಮ ಮಾಹಿತಿಗೆ ಸಂಬಂಧಿಸಿದ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

2022ರಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ ವೇಳೆ ತೌಫಿಕ್ ಅಲ್ಲಿ ಗಡಿಯಾಚೆಯ ನಿರ್ವಾಹಕರ ಸಂಪರ್ಕಕ್ಕೆ ಬಂದಿದ್ದಾನೆಂದು ತನಿಖೆಯಿಂದ ತಿಳಿದುಬಂದಿದೆ. ವಿಚಾರಣೆಯ ಸಮಯದಲ್ಲಿ ಆತ ಪಾಕಿಸ್ತಾನಕ್ಕೆ ಪ್ರಯಾಣಿಸಲು ಹಲವರಿಗೆ ವೀಸಾ ಪಡೆಯಲು ಸಹಾಯ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

 ಆರೋಪಿಯ ಚಟುವಟಿಕೆಗಳ ವ್ಯಾಪ್ತಿ ಪತ್ತೆಹಚ್ಚಲು ಹಾಗೂ ಆತನ ಸಹಚರರನ್ನು ಗುರುತಿಸಲು ಹರಿಯಾಣ ಪೊಲೀಸರು ಮತ್ತು ಕೇಂದ್ರ ಗುಪ್ತಚರ ಸಂಸ್ಥೆಗಳು ತನಿಖೆಯನ್ನು ಮುಂದುವರೆಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0