ರಸ್ತೆ ದಾಟುವಾಗ ಬೈಕ್ ಡಿಕ್ಕಿ, ವ್ಯಕ್ತಿ ಸಾವು
admincoorgdaily

ಕುಶಾಲನಗರ, ಜುಲೈ 1: ಕೊಪ್ಪ ಬಳಿ ರಸ್ತೆ ದಾಟುತ್ತಿದ್ದ ವೇಳೆ ಬೈಕ್ ಡಿಕ್ಕಿಯಾಗಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಮೃತರು ಕೊಪ್ಪ ಗ್ರಾಮದ ಎಸ್‌ಎಲ್‌ಎನ್ ಬಡಾವಣೆ ನಿವಾಸಿ ಕುಮಾರ್ (52). ಇವರು ಕೊಪ್ಪದಲ್ಲಿ ಬೀದಿಬದಿ ವ್ಯಾಪಾರಿಯಾಗಿದ್ದರು.
ಮಂಗಳವಾರ ರಾತ್ರಿ ಕುಶಾಲನಗರದ ಸಚಿನ್ ಎಂಬುವವರು ಕೊಪ್ಪದಿಂದ ಕುಶಾಲನಗರ ಕಡೆಗೆ ದ್ವಿಚಕ್ರ ವಾಹನ (ಟಿಎನ್-36-ಬಿಯು-0558)ದಲ್ಲಿ ಬರುತ್ತಿದ್ದಾಗ ರಸ್ತೆ ದಾಟುತ್ತಿದ್ದ ಕುಮಾರ್ ಅವರಿಗೆ ಡಿಕ್ಕಿ ಹೊಡೆದಿದೆ. ತೀವ್ರ ಗಾಯಗೊಂಡ ಕುಮಾರ್ ಅವರನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಬೈಲುಕುಪ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.