ದಿನಕ್ಕೆ 4 ಸ್ಟಿಂಗ್ ಜ್ಯೂಸ್ ಕುಡಿಯುತ್ತಿದ್ದ ಯುವಕ ಕಿಡ್ನಿ ವೈಫಲ್ಯದಿಂದ ಸಾವು!

Jun 15, 2026 - 21:13
Jun 16, 2026 - 09:17
 0  1.3k
ದಿನಕ್ಕೆ 4 ಸ್ಟಿಂಗ್ ಜ್ಯೂಸ್  ಕುಡಿಯುತ್ತಿದ್ದ ಯುವಕ ಕಿಡ್ನಿ ವೈಫಲ್ಯದಿಂದ ಸಾವು!

ಯಾದಗಿರಿ: ದಿನಕ್ಕೆ 3ರಿಂದ 4 ಬಾಟಲಿ ಸ್ಟಿಂಗ್ ಜ್ಯೂಸ್ ಕುಡಿಯುತ್ತಿದ್ದ ಯುವಕನೊಬ್ಬ ಕಿಡ್ನಿ ವೈಫಲ್ಯದಿಂದ ಸಾವನ್ನಪ್ಪಿರುವ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದಲ್ಲಿ ನಡೆದಿದೆ.

ಮೃತ ಯುವಕನನ್ನು ವಿಜಯಪುರ ಜಿಲ್ಲೆ ಮುದ್ದೇಬಿಹಾಳದಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲು ದೇಸಾಯಿ, 19 ವರ್ಷ ಎಂದು ಗುರುತಿಸಲಾಗಿದೆ. ಕಳೆದ ಹಲವು ದಿನಗಳಿಂದ ಆತ ಪ್ರತಿದಿನ 3ರಿಂದ 4 ಬಾಟಲಿ ಸ್ಟಿಂಗ್ ಜ್ಯೂಸ್ ಸೇವಿಸುತ್ತಿದ್ದ ಎಂದು ಹೇಳಲಾಗಿದೆ.

ಕುಟುಂಬಸ್ಥರು ಮತ್ತು ಸ್ನೇಹಿತರು ಅಷ್ಟೊಂದು ಎನರ್ಜಿ ಡ್ರಿಂಕ್ ಕುಡಿಯುವುದು ಒಳ್ಳೆಯದಲ್ಲ ಎಂದು ತಿಳಿಹೇಳಿದ್ದರೂ ಆತ ಕೇಳಿರಲಿಲ್ಲ. ಇತ್ತೀಚೆಗೆ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅತಿಯಾದ ಕೆಫೀನ್ ಹಾಗೂ ರಾಸಾಯನಿಕಗಳ ಸೇವನೆಯಿಂದ ಕಿಡ್ನಿ ವೈಫಲ್ಯ ಉಂಟಾಗಿ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಶಂಕೆ ವ್ಯಕ್ತಪಡಿಸಿದ್ದಾರೆ.

What's Your Reaction?

Like Like 0
Dislike Dislike 1
Love Love 1
Funny Funny 0
Angry Angry 1
Sad Sad 1
Wow Wow 0