Kodagu

ಚಿತ್ರನಟಿ ರಶ್ಮಿಕಾ ಮಂದಣ್ಣಗೆ ಮದುವೆಯ ಉಡುಗೊರೆ ನೀಡಿದ ಮಂದಣ್ಣ

admincoorgdaily

ಚಿತ್ರನಟಿ ರಶ್ಮಿಕಾ  ಮಂದಣ್ಣಗೆ ಮದುವೆಯ ಉಡುಗೊರೆ ನೀಡಿದ ಮಂದಣ್ಣ

ವಿರಾಜಪೇಟೆ: ಬಹುಭಾಷ ನಟಿ, ನ್ಯಾಷನಲ್ ಕ್ರಶ್ ಖ್ಯಾತಿ, ಕೊಡಗು ಮೂಲದ ಚಲನಚಿತ್ರ ನಟಿ ರಶ್ಮಿಕಾ ಮಂದಣ್ಣ ಅವರಿಗೆ ತಂದೆ ಮಂದಣ್ಣ ಅವರು ವಾಸದ ಮನೆಯನ್ನು ಮದುವೆಯ ಉಡುಗೊರೆಯಾಗಿ ನೀಡಿದರು.

.ವಿರಾಜಪೇಟೆ ಚೆಂಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಕ್ಲೂರು ಗ್ರಾಮದ ನಿವಾಸಿ ಮಾಜಿ ವಿರಾಜಪೇಟೆ ಪಟ್ಟಣ ಪಂಚಾಯಿತಿ ಸದಸ್ಯರಾಗಿದ್ದ ಮುಂಡಚಾಡಿರ ಮದನ್ ಮಂದಣ್ಣ ಮತ್ತು ಪತ್ನಿ ಸುಮನ್ ಮಂದಣ್ಣ ಅವರ ಹೆಸರಿನಲ್ಲಿದ್ದ ಸರ್ವೆ ಸಂಖ್ಯೆ ೧೪೨/೧, ಮತ್ತು ೧೪೨/೨ ಐಷಾರಾಮಿ (ಸೆರಿನಿಟಿ) ಮನೆಯನ್ನು ವಿರಾಜಪೇಟೆ ಉಪ ನೋಂದಾಣಿ ಕಛೇರಿಯಲ್ಲಿ ತಮ್ಮ ಮಗಳಾದ ರಶ್ಮೀಕಾ ಮಂದಣ್ಣ ಹೆಸರಿನಲ್ಲಿ ಖಾತೆ ಬದಲಾವಣೆ ಮಾಡಿಕೊಟ್ಟರು.

 ಇತ್ತಿಚೆಗೆ ರಶ್ಮಿಕಾ ಮಂದಣ್ಣ ಅವರು ಖ್ಯಾತ ತೆಲುಗು ಚಿತ್ರನಟ ವಿಜಯ್ ದೇವಕೊಂಡ ಅವರನ್ನು ವಿವಾಹವಾಗಿದ್ದರು. ವಿವಾಹದ ಉಡುಗೊರೆಯಾಗಿ ಮನೆಯನ್ನು ನೀಡಲಾಗಿದೆ ಎಂದು ಕುಟುಂಬದ ಮೂಲದಿಂದ ತಿಳಿದುಬಂದಿದೆ.

ಇದೇ ಸಂದರ್ಭದಲ್ಲಿ ದಾನ ಪತ್ರ ಮತ್ತು ದಾಖಲೆ ಪತ್ರಗಳನ್ನು ನಿರ್ವಹಿಸಿದ ವಕೀಲರು ಮತ್ತು ಮಂದಣ್ಣ ಕುಟುಂಬದ ವಕೀಲರಾದ ಪಟ್ಟಡ ರೀನಾ ಪ್ರಕಾಶ್ ಮತ್ತು ರಶ್ಮಿಕಾ ಮಂದಣ್ಣ ಅವರ ಖಾಸಗಿ ವ್ಯವಸ್ಥಾಪಕರು, ಅಂಗರಕ್ಷಕರು ಹಾಜರಿದ್ದರು. ವರದಿ;ಕಿಶೋರ್ ಕುಮಾರ್ ಶೆಟ್ಟಿ