ಮಂಗಳೂರು: ಬಾಲ್ ಎಂದು ಬಾಂಬ್​​​​​ನಿಂದ ಬೌಲಿಂಗ್: ಬ್ಯಾಟ್​ನಿಂದ ಹೊಡೆದಾಗ ಬ್ಲಾಸ್ಟ್

Feb 19, 2026 - 19:20
Feb 19, 2026 - 19:22
 0  2.7k
ಮಂಗಳೂರು: ಬಾಲ್ ಎಂದು ಬಾಂಬ್​​​​​ನಿಂದ ಬೌಲಿಂಗ್: ಬ್ಯಾಟ್​ನಿಂದ ಹೊಡೆದಾಗ ಬ್ಲಾಸ್ಟ್
ಸ್ಪೋಟಗೊಂಡ ವಸ್ತು, ಬಾಲಕನ‌ ಕಾಲಿಗೆ ಗಾಯ

ಮಂಗಳೂರು, ಫೆ19: ಚೆಂಡಿನ ಆಕಾರದ ವಸ್ತು ಸ್ಫೋಟಗೊಂಡು ಓರ್ವ ಬಾಲಕನಿಗೆ ಗಾಯವಾಗಿರುವಂತಹ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ‌ ಬಂದಾರು ಗ್ರಾಮದಲ್ಲಿ ನಡೆದಿದೆ.

 ಘಟನೆಯಲ್ಲಿ ಅಭೀಶ್​ ಎಂಬ ಬಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ರವಾನಿಸಲಾಗಿದೆ. ಸದ್ಯ ಬಾಲಕ ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ 9(B), 1(b) ಸ್ಫೋಟಕಗಳ ಕಾಯ್ದೆ, 125 A BNS ಆಕ್ಟ್ ಅಡಿ ಪ್ರಕರಣ ದಾಖಲಾಗಿದೆ.

 ನಡೆದಿದ್ದೇನು? ಬಾಲಕ ಅಭೀಶ್ ಮನೆ ಅಂಗಳದಲ್ಲಿ ಆಟ ಆಡುತ್ತಿದ್ದ. ಈ ವೇಳೆ ಚೆಂಡಿನಾಕಾರದ ವಸ್ತು ಪತ್ತೆಯಾಗಿದೆ. ಬಾಲ್ ರೀತಿ ಇದ್ದ ಬಾಂಬ್​​ನಿಂದ ಮಕ್ಕಳು ಕ್ರಿಕೆಟ್ ಆಡಿದ್ದಾರೆ. ಓರ್ವ ಬಾಲಕ ಪತ್ತೆಯಾದ ಚೆಂಡಿನಾಕಾರದ ವಸ್ತುವನ್ನು ಬೌಲ್ ಮಾಡಿದ್ದು, ಅಭೀಶ್ ಬ್ಯಾಟ್​ನಿಂದ ಹೊಡೆದಾಗ ಬ್ಲಾಸ್ಟ್ ಆಗಿದೆ. ಈ ವೇಳೆ ಅಭೀಶ್​ಗೆ ಸಣ್ಣಪುಟ್ಟ ಗಾಯಗಳಾಗಿವೆ. ಕಾಡು ಹಂದಿ ಬೇಟೆ ಆಡಲು ಇಟ್ಟಿದ್ದ ಬಾಂಬ್​ ಎಂದು ಶಂಕಿಸಲಾಗಿದೆ.

What's Your Reaction?

Like Like 5
Dislike Dislike 3
Love Love 1
Funny Funny 0
Angry Angry 0
Sad Sad 5
Wow Wow 1